ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸರ್ವಿಸ್ ಬಸ್ ನಿಲ್ದಾಣ ಸಮೀಪದ ಶ್ರೀನಿವಾಸ್ ಆರ್ಕೇಡ್ ಮುಂಭಾಗ ಐದಾರು ವರ್ಷಗಳ ಹಿಂದೆ ಜಾಹಿರಾತು ಅಳವಡಿಸಲು ರಾತ್ರೋ ರಾತ್ರಿ ನಿರ್ಮಾಣಗೊಂಡಿದ್ದ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ಹಲವು ಅಪಘಾತಗಳಿಗೆ ಕಾರಣವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಈ ನಡುವೆ ಸರ್ವಿಸ್ ಬಸ್ ನಿಲ್ದಾಣದಿಂದ ಪಾಣೆಮಂಗಳೂರು, ಮೂಡುಬಿದಿರೆ ಮತ್ತು ಮೆಲ್ಕಾರ್, ಮುಡಿಪು, ಸಾಲೆತ್ತೂರು ಕಡೆಗೆ ಸಂಚರಿಸುವ ಖಾಸಗಿ ಬಸ್ ಬಂದು ಮತ್ತೆ ಇಲ್ಲೇ ಕೆಲಹೊತ್ತು ನಿಲ್ಲುತ್ತವೆ. ಇದರಿಂದ ಇಲ್ಲಿನ ಮೆಡಿಕಲ್, ವೈದ್ಯರ ಕ್ಲಿನಿಕ್ ಹಾಗೂ ಎಲ್ಐಸಿ ಕಚೇರಿ ಮೊದಲಾದ ಕಡೆ ತೆರಳುವ ಹಲವರು ಗ್ರಾಹಕರು ಮತ್ತು ಅನಾರೋಗ್ಯ ಪೀಡಿತರು ವಾಹನದಲ್ಲಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.

ಈಗಾಗಲೇ ಇಲ್ಲಿನ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ನಿಲುಗಡೆಯಿಂದಾಗಿ ಹಲವು ಅಪಘಾತಗಳೂ ಸಂಭವಿಸಿವೆ. ಈ ಬಗ್ಗೆ ಕಳೆದ ವರ್ಷ ಪುರಸಭೆ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಬಸ್ ಶೆಲ್ಟರ್ ತೆರವುಗೊಳಿಸುವಂತೆ ನಿರ್ಣಯ ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಇಲ್ಲಿನ ಬಸ್ ನಿಲ್ದಾಣ ಮತ್ತು ಸರ್ವಿಸ್ ರಸ್ತೆ ಬದಿ ಅನಧಿಕೃತ ಫ್ಲೆಕ್ಸ್ ಹಾವಳಿ ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ಆರೋಪವೂ ವಾಹನ ಸವಾರರಿಂದ ಕೇಳಿ ಬಂದಿದೆ.

ಇಲ್ಲಿನ ಶ್ರೀನಿವಾಸ್ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಮುಂಭಾಗ ಹೆದ್ದಾರಿ ಬದಿ ಕಳೆದ ಒಂದು ತಿಂಗಳ ಹಿಂದೆ ‘ಗೇಲ್’ ಕಂಪನಿಗೆ ಸಂಬಂಧಿಸಿದಂತೆ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಅಲ್ಲಲ್ಲಿ ಬೃಹತ್ ಹೊಂಡ ಕೊರೆದಿದ್ದು, ಅವುಗಳಲ್ಲಿ ನೀರು ಮತ್ತು ಕೆಸರು ತುಂಬಿಕೊಂಡಿದೆ. ಈ ಅಪಾಯಕಾರಿ ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ, ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಎಂಜಿನಿಯರ್ ನವೀನ್ ತಿಳಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಸರ್ವಿಸ್ ರಸ್ತೆ ಬದಿ ಅಲ್ಲಲ್ಲಿ ಹೊಂಡ ಕೊರೆದು ಕೆಲವೆಡೆ ಎತ್ತರಕ್ಕೆ ಮಣ್ಣು ತುಂಬಿಸಿದ ಪರಿಣಾಮ ಪಾದಚಾರಿಗಳು ಕುಸಿದು ಬೀಳುತ್ತಿದ್ದಾರೆ ಎಂಬ ಆರೋಪ ಇದೆ.

ಬಸ್ ನಿಲ್ದಾಣದಿಂದ ಹೊರಟ ಖಾಸಗಿ ಬಸ್ ಮತ್ತೆ ಶ್ರೀನಿವಾಸ್ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಎದುರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ ಎಂದು ಸಂಚಾರ ಠಾಣೆ ಪಿಎಸ್ಐ ಆದರ್ಶ್ ಎಚ್ಚರಿಸಿದ್ದಾರೆ.

ಈ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಸಹಿ ಸಂಗ್ರಹಿಸಿ ಪುರಸಭೆ ಮತ್ತು ಸಂಚಾರ ಪೊಲೀಸ್ ಠಾಣೆಗೆ ಸೋಮವಾರ ಮನವಿ ಸಲ್ಲಿಸಿದ್ದರಿಂದ ಮುಖ್ಯಾಧಿಕಾರಿ ಮತ್ತು ಸಂಚಾರಿ ಠಾಣೆ ಎಸೈ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಅನಧಿಕೃತ ಬಸ್ ಶೆಲ್ಟರ್ ಮತ್ತು ರಿಕ್ಷಾ ಪಾರ್ಕಿಂಗ್ ತೆರವುಗೊಳಿಸಿಯೇ ಸಿದ್ಧ ಎಂದು ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-29-1775520848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.