ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾರ್ಚ್ 27ರಿಂದ 28ರವರೆಗೆ ನಡೆಯಲಿರುವ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುರುವಾರ ಸಂಜೆ ‘ಕನ್ನಡ ಸಾಂಸ್ಕೃತಿಕ ದಿಬ್ಬಣ’ ಮೆರವಣಿಗೆ ನಡೆಯಿತು.

ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಅವರು ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.

ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ, ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಇವರು ರಥದಲ್ಲಿ ಸಾಗಿದರು.

ವಿವಿಧ ಶಾಲಾ ಕಾಲೇಜಿನ ಸ್ಕೌಟ್ಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳೂ ಸಹಿತ ಕನ್ನಡ ಬಾವುಟ, ಬಣ್ಣದ ಕೊಡೆ, ಸಮವಸ್ತ್ರಧಾರಿ ಮಹಿಳೆಯರು ಪಾಲ್ಗೊಂಡರು. ಚೆಂಡೆ, ಕೊಂಬು, ವಾದ್ಯ, ಗೊಂಬೆ ಕುಣಿತ, ಕೀಲು ಕುದುರೆ, ನೃತ್ಯ ಭಜನೆ, ಕಂಬಳ ಕೋಣಗಳ ಜೋಡಿ, ಡೊಳ್ಳು ಬಾರಿಸುವ ಮಹಿಳಾ ತಂಡ ಮೆರವಣಿಗೆಗೆ ಮೆರುಗು ನೀಡಿದವು.

ಮೂಲ್ಕಿ ಘಟಕ ಅಧ್ಯಕ್ಷ ಮಿಥುನ್ ಉಡುಪ, ಪುತ್ತೂರು ಘಟಕ ಅಧ್ಯಕ್ಷ ಉಮೇಶ್ ನಾಯಕ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ, ಯೋಜನಾಧಿಕಾರಿ ಜಯಾನಂದ ಪಿ., ಪ್ರಮುಖರಾದ ಕೆ.ಕೃಷ್ಣಕುಮಾರ್ ಪೂಂಜ, ಅಬೂಬಕ್ಕರ್ ಅಮ್ಮುಂಜೆ, ರಾಮದಾಸ್ ಬಂಟ್ವಾಳ್, ಅಶೋಕ್ ಶೆಟ್ಟಿ ಸರಪಾಡಿ, ಸುಭಾಶ್ಚಂದ್ರ ಜೈನ್, ಅಬ್ಬಾಸ್ ಅಲಿ, ಪ್ರಭಾಕರ ಪ್ರಭು, ಚಂದ್ರಹಾಸ ಶೆಟ್ಟಿ, ಶೇಷಪ್ಪ ಮಾಸ್ಟರ್, ಉಮೇಶ್ ಕುಮಾರ್ ವೈ., ರವೀಂದ್ರ ಕುಕ್ಕಾಜೆ, ಮೆರವಣಿಗೆ ಸಮಿತಿ ಸಂಚಾಲಕ ಉಮರ್ ಮಂಚಿ, ಸಹಸಂಚಾಲಕರಾದ ಮೋಹನ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ನಾರಾಯಣ ಸಿ.ಪೆರ್ನೆ, ಬದ್ರುದ್ದೀನ್ ಮಂಚಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-729790590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.