ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಕೌಡೇಲು ಪ್ರದೇಶದ ನಿವಾಸಿಗಳು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ನಿವಾರಿಸುವಂತೆ ಸಲ್ಲಿಸಿರುವ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಳೆಗಾಲದಲ್ಲಿ ಮಾತ್ರ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಮ್ಮ ಸಮಸ್ಯೆ ಕೇಳಬೇಕಾದ ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು ಕೇರಳ, ದಾವಣಗೆರೆ, ಬಾಗಲಕೋಟೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮತಯಾಚಿಸುತ್ತಿದ್ದಾರೆ.

ಪುರಸಭೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದ ಕಾರಣ ಅಧಿಕಾರಿಗಳದ್ದೇ ಆಡಳಿತ. ನಮ್ಮ ಹಲವು ವರ್ಷಗಳ ಬೇಡಿಕೆ ಬಗ್ಗೆ ಧ್ವನಿ ಎತ್ತುವವರೇ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೇತ್ರಾವತಿ ನದಿಯಲ್ಲಿ ನೀರು ತುಂಬಿದ್ದರೂ ಕೇವಲ ಐದಾರು ಕಿ.ಮೀ.ದೂರದಲ್ಲಿರುವ ಕೌಡೇಲು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪುರಸಭೆ ಎದುರು ಎರಡೆರಡು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಮತ್ತೆ ಕೊಡಪಾನ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಸ್ಥಳೀಯ ನಿವಾಸಿ ಇಬ್ರಾಹಿಂ ಕೌಡೇಲು ಹೇಳಿದರು.

ಒಂದು ವಾರದ ಹಿಂದೆ ಪುರಸಭಾಧ್ಯಕ್ಷ ವಾಸು ಪೂಜಾರಿ ಮತ್ತು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಭೇಟಿ ನೀಡಿದ ಪರಿಣಾಮ ನಾಲ್ಕೈದು ದಿನ ನೀರು ಪೂರೈಕೆಯಾಗಿ ಬಳಿಕ ಮತ್ತೆ ಸ್ಥಗಿತಗೊಂಡಿದೆ ಎಂದು ಮಹಮ್ಮದ್ ಕೌಡೇಲು ಹೇಳಿದರು.

ಇಲ್ಲಿನ ಶಾಂತಿಗುಡ್ಡೆ, ಬೊಂಡಾಲ, ಜ್ಯೋತಿಬೈಲು, ರೆಂಗೇಲು ಪ್ರದೇಶಗಳಿಗೆ ಪ್ರತಿದಿನ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕೌಡೇಲು ಪ್ರದೇಶಕ್ಕೆ ಯಾಕೆ ಬರುತ್ತಿಲ್ಲ ಎಂಬ ಬಗ್ಗೆ ಪುರಸಭೆ ಅಧಿಕಾರಿಗಳು ಮೌನವಾಗಿದ್ದಾರೆ. ಇಲ್ಲಿನ 40 ಮನೆಗಳಿಗೆ ಪ್ರತ್ಯೇಕ ಟ್ಯಾಂಕ್ ಅಳವಡಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಆಸ್ಮತ್ ಇರ್ಷಾದ್.

ಈ ಪ್ರದೇಶದಲ್ಲಿ 6 ವರ್ಷಗಳಿಂದ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ಗಿಡಗಳು ಸುಡು ಬಿಸಿಲಿಗೆ ಕರಟಿ ಹೋದ ಪರಿಣಾಮ ಬರಡು ಭೂಮಿಯಂತೆ ಗೋಚರಿಸುತ್ತಿದ್ದು, ಕೆಲವೊಂದು ಮಂದಿ ಮನೆಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದಾರೆ. ನಮ್ಮ ಮನೆ ಮಾರಾಟ ಮಾಡೋಣ ಎಂದರೆ ನೀರಿನ ಸಮಸ್ಯೆಯಿಂದ ಇಲ್ಲಿಗೆ ಗಿರಾಕಿಗಳೂ ಬರುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಹಸೀನಾ ಆಶ್ಫಕ್ ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-29-2003150706

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.