ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಳಲಿ: ಚೆಂಡಿನ ಗದ್ದೆಯಲ್ಲಿ ಭತ್ತ ನಾಟಿ

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚಾಲನೆ
Last Updated 2 ಆಗಸ್ಟ್ 2022, 2:43 IST
ಅಕ್ಷರ ಗಾತ್ರ

ಬಂಟ್ವಾಳ: ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಪೊಳಲಿ ದೇವಳದ ಚೆಂಡಿನ ಗದ್ದೆಯಲ್ಲಿ ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ಕೆ ಶಾಸಕ ರಾಜೇಶ್ ನಾಯ್ಕ್ ಸೋಮವಾರ ಚಾಲನೆ ನೀಡಿದರು.

ಪ್ರತೀ ವರ್ಷದಂತೆ ಸ್ಥಳೀಯರ ಸಹಕಾರದೊಂದಿಗೆ ಚೆಂಡಿನ ಗದ್ದೆಯಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ಎಂಒ-4 ಭದ್ರ ತಳಿ ಬಿತ್ತನೆ ಮಾಡಲಾಗಿದೆ. ಯುವ ಜನತೆ ಭತ್ತದ ಬೇಸಾಯದಲ್ಲಿ ತೊಡಗಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

ದೇವಳದ ಅರ್ಚಕ ನಾರಾಯಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೊಳಲಿ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್ ನಾವಡ, ನಿರ್ದೇಶಕ ಸುಕೇಶ್ ಚೌಟ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಯಶವಂತ ಪೊಳಲಿ, ಕರಿಯಂಗಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಾವತಿ ದೇವಾಡಿಗ, ಸದಸ್ಯ ಲೋಕೇಶ್ ಭರಣಿ, ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಅಮ್ಮುಂಜೆ ಗ್ರಾಮ ಪಂ‌ಚಾಯಿತಿ ಸದಸ್ಯ ಕಾರ್ತಿಕ್ ಬಳ್ಳಾಲ್, ರಮಾನಾಥ ರಾಯಿ, ಪ್ರಮುಖರಾದ ಕಿಶೋರ್ ಪಲ್ಲಿಪಾಡಿ, ಚಂದ್ರಶೇಖರ ಬಡಕಬೈಲು, ಅಶೋಕ್ ಬಡಕಬೈಲು, ಸುಬ್ರಾಯ ಕಾರಂತ, ಶುಭಕರ ಶೆಟ್ಟಿ, ರೋಶನ್ ಪಲ್ಲಿಪಾಡಿ, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಂದನ್ ಶೆಣೈ, ಕೃಷಿ ಅಧಿಕಾರಿ ಬಿ.ಬಿ.ಅನಗವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT