ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸರ್ವಿಸ್ ಬಸ್ ನಿಲ್ದಾಣ ಸಮೀಪದ ಶ್ರೀನಿವಾಸ್ ಆರ್ಕೇಡ್ ಬಳಿ 6 ವರ್ಷಗಳ ಹಿಂದೆ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಜಾಹೀರಾತು ಫಲಕ ಅಳವಡಿಸುವ ಅನಧಿಕೃತ ಬಸ್ ಶೆಲ್ಟರ್ ತೆರವುಗೊಂಡಿದ್ದು, ವಾಹನ ಸವಾರರು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಅನಧಿಕೃತ ಬಸ್ ಶೆಲ್ಟರ್ನಿಂದ ಪುರಸಭೆಗೆ ವರ್ಷಕ್ಕೆ ₹2 ಲಕ್ಷ ಮೊತ್ತದ ತೆರಿಗೆ ಪಾವತಿಸುತ್ತಿರುವ ಶ್ರೀನಿವಾಸ್ ಆರ್ಕೇಡ್ ಕಟ್ಟಡದಲ್ಲಿರುವ ಹಲವು ವೈದ್ಯರು, ಮತ್ತಿತರ ಕಚೇರಿ ಮಳಿಗೆಗಳ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂಟ್ವಾಳ, ಮೂಡುಬಿದಿರೆ, ಸರಪಾಡಿ, ಪಾಣೆಮಂಗಳೂರು, ಮುಡಿಪು, ಸಜಿಪ, ಸಾಲೆತ್ತೂರು ಮತ್ತಿತರ ಕಡೆ ತೆರಳುವ ಖಾಸಗಿ ಬಸ್ಗಳು ಶೆಲ್ಟರ್ ಬಳಿ ನಿಂತು ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಇಲ್ಲಿ ರಿಕ್ಷಾ ನಿಲುಗಡೆಯಾಗುತ್ತಿದ್ದು, ಗೇಲ್ ಕಂಪನಿ ವತಿಯಿಂದ ಪೈಪ್ಲೈನ್ ನೆಪದಲ್ಲಿ ಅಲ್ಲಲ್ಲಿ ಅಪಾಯಕಾರಿ ಹೊಂಡ ಕೊರೆದ ಪರಿಣಾಮ ಹಲವು ಅಪಘಾತಗಳಿಗೆ ಕಾರಣ ವಾಗಿದೆ ಎಂದು ಆರೋಪಿಸಿ ಬಂಟ್ವಾಳ ಪುರಸಭೆ, ಸಂಚಾರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು.

ಈ ಬಗ್ಗೆ ಮೇ 13ರಂದು ‘ಪ್ರಜಾವಾಣಿ’ಯಲ್ಲಿ ‘ಅಪಾಯಕಾರಿ ಹೊಂಡ ಅವಘಡಕ್ಕೆ ಆಹ್ವಾನ, ಅನಧಿ ಕೃತ ಬಸ್ ಶೆಲ್ಟರ್ ತೆರವಿಗೆ ಆಗ್ರಹ’ ಎಂದು ವರದಿ ಪ್ರಕಟಗೊಂಡಿತ್ತು.ಇದೀಗ ಪುರಸಭೆ, ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನಧಿಕೃತ ಬಸ್ ಶೆಲ್ಟರ್ ತೆರವುಗೊಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-1845305064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.