ಬಂಟ್ವಾಳ: ಯಕ್ಷಗಾನ ಕ್ಷೇತ್ರದಲ್ಲಿ 70 ವರ್ಷ ನಿರಂತರ ತಿರುಗಾಟ ನಡೆಸುವ ಮೂಲಕ ದಾಖಲೆ, ಸಾಧನೆ ಮಾಡಿರುವ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರು ಯಕ್ಷಗಾನದ ಮೊದಲ ಹೆಜ್ಜೆಯಿಂದ ಕೊನೆಯ ಹೆಜ್ಜೆಯವರೆಗೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ಕುಂಬಳೆ ಸುಂದರ ರಾಯರು ಬಣ್ಣಿಸಿದಂತೆ ಅವರು ‘ತೆಂಕು ತಿಟ್ಟಿನ ಯಕ್ಷಗಾನಕ್ಕೆ ಪರಿಪೂರ್ಣ ರೂಪ ಕೊಟ್ಟವರು’. ಇಂಥ ಕಲಾವಿದರ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಬೇಕು ಎಂದು ವಿದ್ವಾಂಸ ಎಂ.ಪ್ರಭಾಕರ ಜೋಷಿ ಹೇಳಿದರು.

ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ವತಿಯಿಂದ ಸೋಮವಾರ ನಡೆದ ಯಕ್ಷಗಾನ ದಶಾವತಾರಿ ಡಾ.ಕೆ.ಗೋವಿಂದ ಭಟ್ ಅವರ ಸಾರ್ವಜನಿಕ ಶ್ರದ್ಧಾಂಜಲಿ ಮತ್ತು ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ತನ್ನ ಕಷ್ಟಗಳನ್ನು ತೋರಿಸಿಕೊಳ್ಳದೆ ನೈಜ ಕಲಾವಿದನಾಗಿ ವೇಷ ಮಾಡಿದವರು ಗೋವಿಂದ ಭಟ್ಟರು ಎಂದು ಬಣ್ಣಿಸಿದರು.

ಕಲಾವಿದರಾದ ಉಜಿರೆ ಅಶೋಕ ಭಟ್ಟ, ಹಾದಿಗಲ್ಲು ಲಕ್ಷ್ಮೀನಾರಾಯಣ ರಾವ್, ಭಾಗವತ ಪಟ್ಲ ಸತೀಶ ಶೆಟ್ಟಿ, ಪುತ್ತಿಗೆ ರಘುರಾಮ ಹೊಳ್ಳ, ಜಬ್ಬಾರ್ ಸಮೊ, ಬಿ.ಭುಜಬಲಿ ಧರ್ಮಸ್ಥಳ, ಪ್ರೊ.ಎಂ.ಎಲ್.ಸಾಮಗ, ಭಾಸ್ಕರ ರೈ ಕುಕ್ಕುವಳ್ಳಿ, ಅರುವ ಕೊರಗಪ್ಪ ರೈ, ಕೊಳ್ಯೂರು ರಾಮಚಂದ್ರ ರಾವ್, ಜಿ.ಕೆ.ಭಟ್ ಸೇರಾಜೆ, ಪಂಜ ಭಾಸ್ಕರ ಭಟ್ ನುಡಿನಮನ ಸಲ್ಲಿಸಿದರು.

ಪ್ರಮುಖರಾದ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಹರಿಕೃಷ್ಣ ಪುನರೂರು, ಆರ್.ಕೆ.ಭಟ್, ಸಂಜಯ ಕುಮಾರ್, ಶರವು ರಾಘವೇಂದ್ರ ಶಾಸ್ತ್ರಿ, ರಾಧಾಕೃಷ್ಣ ಕಲ್ಚಾರ್, ಬೇಗಾರು ಶಿವಕುಮಾರ್, ವಸಂತ ಗೌಡ ಕಾಯರ್ತಡ್ಕ, ಸರಪಾಡಿ ಅಶೋಕ ಶೆಟ್ಟಿ, ದಿವಾಣ ಗೋವಿಂದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಿದ್ಯಾ ಕೋಳ್ಯೂರು, ಮುರಳಿ ಕಡೆಕಾರ್, ಕಟೀಲು ಹರಿನಾರಾಯಣದಾಸ ಆಸ್ರಣ್ಣ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶಾರದಾ ಟೀಚರ್, ಗಿರೀಶ್ ರೈ ಕಕ್ಯಪದವು, ವಾಸುದೇವ ರಂಗ ಭಟ್ಟ, ಪ್ರಶಾಂತ್ ಹೊಳ್ಳ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಮಾವೆ ದಿನಕರ ಭಟ್, ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ಭಾಗವಹಿಸಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-29-1269027675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.