ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ: ಉಳಿಕೆ ಹಣ ಸರ್ಕಾರಿ ಶಾಲೆಗೆ

ಅಮ್ಮುಂಜೆ: ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ
Last Updated 7 ಡಿಸೆಂಬರ್ 2022, 14:37 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ಹಣವನ್ನು ಸಮ್ಮೇಳನದ ನಡೆದ ಅಮ್ಮುಂಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲು ನಿರ್ಧರಿಸಲಾಯಿತು.

ಇಲ್ಲಿ ಈಚೆಗೆ ನಡೆದ ಸಮ್ಮೇಳನದ ಲೆಕ್ಕಪತ್ರ ಮಂಡನೆ ಮತ್ತು ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನದಲ್ಲಿ ಉಳಿಕೆ ಹಣ ₹1.48 ಲಕ್ಷ ಮೊತ್ತಕ್ಕೆ ಸ್ಥಳೀಯ ಉದ್ಯಮಿ ಜಯರಾಮ ಕೃಷ್ಣ ಪೊಳಲಿ ನೀಡಿದ ₹10 ಸಾವಿರ ಸೇರಿಸಿ ಒಟ್ಟು ₹1.58 ಲಕ್ಷವನ್ನು ಶಾಲೆಯಲ್ಲಿ ಸ್ಥಿರ ಠೇವಣಿ ಇಟ್ಟು, ಆ ಮೂಲಕ ಇಲ್ಲಿನ ಗೌರವ ಶಿಕ್ಷಕರ ವೇತನಕ್ಕೆ ಬಳಸಲು ಸಮಿತಿಯಲ್ಲಿ ನಿರ್ಧರಿಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನ ಅಧ್ಯಕ್ಷ ಪ್ರೊ.ಕೆ.ಬಾಲಕೃಷ್ಣ ಗಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪ್ರಮುಖರಾದ ವಿ. ಸುಬ್ರಹ್ಮಣ್ಯ ಭಟ್, ಡಿ.ಬಿ.ಅಬ್ದುಲ್ ರಹಿಮಾನ್, ರಾಜೇಶ್ವರಿ, ಪ್ರಮುಖರಾದ ಗುಂಡಿಲಗುತ್ತು ಶಂಕರ ಶೆಟ್ಟಿ, ಲೂವಿಝಾ ಕುಟಿನ್ಹೋ, ಗಣೇಶ ಪ್ರಸಾದ ಪಾಂಡೇಲು, ಮಹಮ್ಮದ್, ರವೀಂದ್ರ ಕುಕ್ಕಾಜೆ, ರಜನಿ ಚಿಕ್ಕಯಮಠ, ಅಬೂಬಕರ್ ಅಮ್ಮುಂಜೆ, ಜನಾರ್ದನ ಅಮ್ಮುಂಜೆ, ಶಿಕ್ಷಕ ಹರೀಶ್ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT