ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ‘ಜ್ಯೋತಿ ಟಾಕೀಸ್ ನಿರ್ಮಾಣಕ್ಕೂ ಮುನ್ನವೇ ಆ ಜಾಗಕ್ಕೆ ಅಂಬೇಡ್ಕರ್ ವೃತ್ತ ಎಂಬ ಹೆಸರಿತ್ತು. ಜ್ಯೋತಿ ಟಾಕೀಸ್ ನಿರ್ಮಾಣವಾದ ಬಳಿಕ ಅದನ್ನು ಜ್ಯೋತಿ ವೃತ್ತ ಎಂದು ಜನ ಕರೆಯಲಾರಂಭಿಸಿದರು. ಅದಕ್ಕೆ ಅಧಿಕೃತವಾಗಿ ‘ಅಂಬೇಡ್ಕರ್ ವೃತ್ತ’ ಎಂದು ನಾಮಕರಣ ಮಾಡಲಾಗಿದೆ. ಆದರೂ ಈ ವೃತ್ತದ ಅಭಿವೃದ್ಧಿಗೆ ಇಚ್ಛಾ ಶಕ್ತಿ ಕೊರತೆ ಇದೆ. ಈ ವಿಚಾರದಲ್ಲಿ ಏನೇ ತಾಂತ್ರಿಕ ಅಡ್ಡಿಗಳಿದ್ದರೂ ಸರಿಪಡಿಸಲು ಸಾಧ್ಯ ಇದೆ ಎಂದು ಇದರ ನೀಲ ನಕ್ಷೆ ಸಿದ್ಧಪಡಿಸಿರುವ ವಾಸ್ತುಶಿಲ್ಪ ತಜ್ಞರು ತಿಳಿಸಿದ್ದಾರೆ’ ಎಂದರು.
ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ, ‘ಅಂಬೇಡ್ಕರ್ ವೃತ್ತದಲ್ಲಿ ಅವರ ಪ್ರತಿಮೆ ನಿಲ್ಲಿಸಿ ಅದನ್ನು ಅಭಿವೃದ್ಧಿಪಡಿಸಬೇಕು’ ಎಂದರು.