ಬೆಳ್ತಂಗಡಿ: ಬದಲಾದ ಕಾಲಘಟ್ಟಕ್ಕೆ ಪೂರಕವಾಗಿ ಶಿಕ್ಷಣದ ಅಗತ್ಯವಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಭವಿಷ್ಯ ರೂಪಿಸುವ ಶಿಕ್ಷಣದ ಅಗತ್ಯವಿದ್ದು, ಇದು ಬಳಂಜ ಶಿಕ್ಷಣ ಟ್ರಸ್ಟ್ನ ಕಲ್ಪನೆಯಲ್ಲಿ ಸಿಗುತ್ತಿರುವುದು ಹೆಮ್ಮೆಯ ವಿಷಯ. ಮಕ್ಕಳ ಶಿಕ್ಷಣಕ್ಕೆ, ಶಾಲೆಗಳ ಅಭಿವೃದ್ಧಿಗೆ ನೆರವು ನೀಡುವುದು ಮಕ್ಕಳ ಭವಿಷ್ಯ ರೂಪಿಸಿದಂತೆ ಎಂದು ಡಬ್ಲಿನ್ ದೇಶದ ಪ್ರಜೆ ಋತಿಕಾ ಶೋಭಿತ್ ಹೇಳಿದರು.

ಬಳಂಜದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲಾ ಆರಂಭೋತ್ಸವ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ, ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ನೀಡಿದ ಎಲ್ಕೆಜಿ, ಯುಕೆಜಿ ಮಕ್ಕಳ ಪಠ್ಯ ಪುಸ್ತಕ ಹಾಗೂ ವೈಯಕ್ತಿಕ ನೆರವು ವಿತರಿಸಿ ಅವರು ಮಾತನಾಡಿದರು.

ಬಳಂಜ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ರಾಕೇಶ್ ಹೆಗ್ಡೆ ಮಾತನಾಡಿ, ಊರಿನ ಶಾಲೆ ಬೆಳಗಿಸುವ ಜತೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ನಿಜವಾದ ಸೇವೆ. ಬಳಂಜ ಶಿಕ್ಷಣ ಟ್ರಸ್ಟ್ ಮೂಲಕ ಹಲವು ಅಭಿವೃದ್ಧಿ ಕಾರ್ಯದ ಜತೆ ಶಿಕ್ಷಣದ ಗುಣಮಟ್ಟ ಹೆಚ್ಚಿದೆ ಎಂದರು.

ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಮಾತನಾಡಿ, ಊರಿನ ಶಾಲೆ ಬೆಳಗಿದರೆ ಊರೇ ಬೆಳಗಿದಂತೆ. ಇಂದು ಮಕ್ಕಳ ಶಿಕ್ಷಣ, ಶಾಲಾ ಮೂಲ ಸೌಕರ್ಯಗಳ ಬಗ್ಗೆ ಬಳಂಜ ಶಿಕ್ಷಣ ಟ್ರಸ್ಟ್ ಹಲವು ಕನಸುಗಳನ್ನು ಕಂಡು ದಾನಿಗಳ ಮೂಲಕ ನನಸು ಮಾಡುತ್ತಿದೆ. ಮಕ್ಕಳಿಗೆ ಆಂಗ್ಲ ಮಾಧ್ಯಮದ ಜತೆ ಕನ್ನಡ ಮಾಧ್ಯಮ ಶಿಕ್ಷಣ, ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು, ಇದರಿಂದ ಮಕ್ಕಳಲ್ಲಿ ಬೆಳವಣಿಗೆ ಕಾಣುತ್ತಿದ್ದೇವೆ. ಒಂದು ದಾಖಲಾತಿ ಆಗುತ್ತಿದ್ದ ಬಳಂಜ ಶಾಲೆಗೆ ಈಗ 90ಕ್ಕೂ ಅಧಿಕ ಮಕ್ಕಳು ದಾಖಲಾಗುತ್ತಿದ್ದಾರೆ. ಈ ವರ್ಷದಿಂದ ನಾಲ್ಕನೇ ತರಗತಿಯಿಂದ ಉಚಿತ ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ನೀಡಲಾಗುವುದು. ಮಕ್ಕಳಿಗೆ ಅನುಕೂಲಕ್ಕೆ ಅಶ್ವತ್ಥ್ ಹೆಗ್ಡೆ ಫೌಂಡೇಷನ್ ಮೂಲಕ ವಾಹನ ವ್ಯವಸ್ಥೆ, ಉದ್ಯಮಿ ಲಿಂಬಯ ದೇವಾಡಿಗ ಅವರ ಕೊಡುಗೆಯಿಂದ ಚಿಣ್ಣರ ಅಂಗಣ ನಿರ್ಮಾಣ ಆಗಿದೆ. ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇವೆ ಎಂದರು.

ಬಳಂಜ ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಗೌರವ ಸದಸ್ಯ ಸಂತೋಷ್ ಕುಮಾರ್ ಕಾಪಿನಡ್ಕ ಅಧ್ಯಕ್ಷತೆ ವಹಿಸಿ ದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ 100 ಫಲಿತಾಂಶ ಬಂದಿದ್ದು, ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನ ಮತ್ತು ಶಿಕ್ಷಕರು ನಗದು ಪುರಸ್ಕಾರ ನೀಡಿ, ಪಟ್ಲ ಫೌಂಡೇಷನ್ನಿಂದ ಬಹುಮಾನ ನೀಡಿ ಅಭಿನಂದಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷ ರತ್ನಾಕರ್ ಪೂಜಾರಿ, ಬಳಂಜ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ ಜೈನ್, ಕಾನೂನು ಸಲಹೆಗಾರ ಸತೀಶ್ ರೈ ಬಾರ್ದಡ್ಕ, ಬಳಂಜ ಪಿಡಿಒ ಶಶಿಕಲಾ ಭಾಗವಹಿಸಿದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಸ್ವಾಮಿ ವಂದಿಸಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-846805701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.