ಬೆಳ್ತಂಗಡಿ: ನಗರದ ವಕೀಲರ ಕಚೇರಿ, ಹೋಟೆಲ್, ಅಂಗಡಿಗಳಿಗೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ ನಗದು ಕಳವು ಮಾಡಿದ್ದಾರೆ.

ಕೋರ್ಟ್ ರಸ್ತೆಯ ಧರ್ಮಶ್ರೀ ಕಟ್ಟಡದ ಸಮೃದ್ಧಿ ಎಂಟರ್ಪ್ರೈಸಸ್ನಿಂದ ಸುಮಾರು ₹ 1.50 ಲಕ್ಷ ನಗದು, ಸಿಸಿಟಿವಿ ಮೆಮೊರಿ ಕಾರ್ಡ್ ಕಳವು ಮಾಡಿದ್ದಾರೆ. ಅದೇ ಕಟ್ಟಡದ ಮಹಮ್ಮದ್ ಹನೀಫ್ ಅವರ ಟಿ.ಎಚ್.ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲೀಕರ ಕಚೇರಿ, ವಕೀಲರಾದ ರಾಧಾಕೃಷ್ಣ, ಉಷಾ ಎನ್.ಜಿ., ಯತೀಶ್ ಶೆಟ್ಟಿ ಪಿ. ಅವರ ಕಚೇರಿಗೆ ಕಳ್ಳರು ನುಗ್ಗಿದ್ದಾರೆ.

ಮಾತೃಶ್ರೀ ಹೋಟೆಲ್ನ ಡಬ್ಬಿ ಯಿಂದ ಸುಮಾರು ₹ 5ಸಾವಿರ, ಡ್ರಾಯರ್ನಿಂದ ಸುಮಾರು ₹ 2 ಸಾವಿರ, ಶಬರಿ ಎಂಟರ್ಪ್ರೈಸಸ್ನಿಂದ ಸುಮಾರು ₹ 2 ಸಾವಿರ, ವಕೀಲ ಜಯರಾಮ ಮಣಿ ಯಾಣಿ ಅವರ ಕಚೇರಿ, ಮೆ. ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್, ವಕೀಲ ಜಿತೇಶ್ ಕೆ. ಅವರ ಕಚೇರಿಗೆ ನುಗ್ಗಿದ್ದಾರೆ.

ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-1991731828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.