ಬೆಳ್ತಂಗಡಿ: ಬೆಳ್ತಂಗಡಿಯ ಸಿರೋ-ಮಲಬಾರ್ ಕಥೋಲಿಕ್ ಧರ್ಮಪ್ರಾಂತ್ಯದ ಪಾಲನಾ ಸಮಿತಿ ಹಾಗೂ ಧರ್ಮಗುರುಗಳ ಸಮ್ಮೇಳನ ಧರ್ಮಪ್ರಾಂತ್ಯದ ಜ್ಞಾನ ನಿಲಯದಲ್ಲಿ ಮಂಗಳವಾರ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಷಪ್ ಜೇಮ್ಸ್ ಪಟ್ಟೇರಿಲ್, ಧರ್ಮಪ್ರಾಂತ್ಯದ ಪ್ರಥಮ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಉತ್ತಮ ಅಡಿಪಾಯವನ್ನು ಹಾಕಿದ್ದಾರೆ. ಧರ್ಮಪ್ರಾಂತ್ಯವನ್ನು ನಿರ್ಮಿಸುವಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಜನ ಸಾಮಾನ್ಯರ ಸಮರ್ಪಿತ ಪ್ರಯತ್ನವಿದೆ. ಮುಂಬರುವ ಐದು ವರ್ಷಗಳವರೆಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಸ್ಥಾಪಿಸುವುದು ತಕ್ಷಣದ ಕಾರ್ಯವಾಗಿದೆ. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಹಾಗೂ ಹಣಕಾಸು ಸುಸ್ಥಿರತೆ ಮೂಲಕ ಧರ್ಮಪ್ರಾಂತ್ಯದ ಪ್ರಗತಿಗೆ ಅಗತ್ಯವಾದ ಕಾರ್ಯತಂತ್ರದ ರೂಪಿಸಬೇಕಾಗಿದೆ ಎಂದರು.

ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ.ಮಣಿ ವೆಲುತ್ತೆಡತ್ತುಪರಂಬಿಲ್ ಮಾತನಾಡಿ, ನಾವು ಉತ್ತಮ ಭವಿಷ್ಯಕ್ಕಾಗಿ ದೃಷ್ಟಿಕೋನ ಮತ್ತು ಗುರಿ ರೂಪಿಸಿಕೊಳ್ಳಬೇಕು ಎಂದರು.

ಬಿಜು ಮುಟ್ಟತ್ತುಕುನ್ನೆಲ್ ಮತ್ತು ಜೋಜಿ ಕಕ್ಕರಮಟ್ಟತಿಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಪಾಲನಾ ಸಮಿತಿಯಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರ ಪ್ರತಿನಿಧಿಗಳು ಮತ್ತು ವಿವಿಧ ಧರ್ಮಕೇಂದ್ರಗಳ ಪ್ರಮುಖರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1013357140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.