ಬೆಳ್ತಂಗಡಿ: ಇಲ್ಲಿನ ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.

ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಅವರು ಕಕ್ಕಿಂಜೆಯ ಉರಗಮಿತ್ರ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಿದ್ದರು. ಅವರು ನಾಗರಹಾವನ್ನು ಹಿಡಿದಾಗ ಗೋಡೆಯಲ್ಲಿ ಮರಿಗಳು ಕಂಡು ಬಂದಿದ್ದವು. ಅವುಗಳನ್ನು ತಾಯಿಯೊಂದಿಗೆ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಸುರಕ್ಷಿತ ಜಾಗದಲ್ಲಿ ಗುರುವಾರ ಬಿಡಲಾಗಿದೆ.

ಮರಿಗಳು 10 ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿರಬಹುದು ಎಂದು ಅಂದಾಜಿಸಲಾಗಿದ್ದು ಎಲ್ಲವೂ ಆರೋಗ್ಯ ಪೂರ್ಣವಾಗಿ ಇರುವುದಾಗಿ ಅನಿಲ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ನೆರಿಯ ಗ್ರಾಮದ ಗುಂಡಿಕಂಡ ಬಳಿ ಮನೆಯ ಗೋಡೆಯೊಂದರಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ರಕ್ಷಿಸಿದ ಅನಿಲ್ ಕೃತಕ ಕಾವು ನೀಡಿ ಮರಿಗಳು ಹೊರಬಂದ ಬಳಿಕ ಅರಣ್ಯಕ್ಕೆ ಬಿಟ್ಟಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-29-1519933630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.