ಬೆಳ್ತಂಗಡಿ: ‘ದುಡಿಯುವ ಜನರ ಏಕತೆಯನ್ನು ಒಡೆಯುವ ಕೆಲಸವನ್ನು ದುಡಿಸುವ ವರ್ಗ ಮಾಡುತ್ತಿದ್ದು, ಯಾವುದೇ ಕುತಂತ್ರಕ್ಕೆ ಒಳಗಾಗದೆ ಏಕತೆಯಿಂದ ಬದುಕನ್ನು ಉತ್ತಮ ಪಡಿಸಿಕೊಳ್ಳುವುದು ದುಡಿಯುವ ವರ್ಗದ ರಾಜಕೀಯವಾಗಬೇಕು’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಭಟ್ ಹೇಳಿದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ತಾಲ್ಲೂಕು ಕಚೇರಿವರೆಗೆ ನಡೆದ ರ್ಯಾಲಿಯನ್ನು ಸಮಾಪನಗೊಳಿಸಿ ಬೆಳ್ತಂಗಡಿ ಆಡಳಿತ ಸೌಧದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಈಶ್ವರಿ ಪದ್ಮುಂಜ ಮಾತನಾಡಿ, ಶೋಷಣೆಯ ವಿರುದ್ಧ ಸಿಡಿದೇಳಬೇಕು ಎಂದರು.

ರೈತ ಸಂಘದ ಲಕ್ಷ್ಮಣ ಗೌಡ, ಆಶಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ದೇವಕಿ, ಜೆ.ಎಂ.ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕಿರಣಪ್ರಭಾ, ಡಿವೈಎಫ್ಐ ತಾಲ್ಲೂಕು ಘಟಕದ ಕಾರ್ಯದರ್ಶಿ ಅಭಿಷೇಕ್, ಎಸ್.ಎಫ್.ಐ. ಜಿಲ್ಲಾ ಘಟದಕ ಕಾರ್ಯದರ್ಶಿ ವಿನುಶರಮಣ ಮಾತನಾಡಿದರು.

ಪ್ರಮುಖರಾದ ಪುಷ್ಪ, ಶ್ರೇಯ ಪುದುವೆಟ್ಟು, ಜಯರಾಮ ಮಯ್ಯ, ಸುಕುಮಾರ್ ದಿಡುಪೆ, ಅಜಿ ಎಂ.ಜೋಸ್, ಅಪ್ಪಿ, ಕುಮಾರಿ ಭಾಗವಹಿಸಿದ್ದರು. ಸಂಗಾತಿ ಗುಂಪು ಯೋಜನೆಯ ಗುಂಪುಗಳಿಗೆ ಲಾಭಾಂಶ ವಿತರಿಸಲಾಯಿತು.

ಕಾರ್ಯಕರ್ತೆ ಅಪ್ಸರಾಲಿಯ ಮನವಿ ವಾಚಿಸಿದರು. ಸಿಐಟಿಯು ತಾಲ್ಲೂಕು ಘಟಕದ ಸಂಚಾಲಕ ಲೋಕೇಶ್ ಸ್ವಾಗತಿಸಿ, ಅಶ್ವಿತ ವಂದಿಸಿದರು. ಬೆಳ್ತಂಗಡಿ ತಾಲ್ಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-29-576750816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.