ಬೆಳ್ತಂಗಡಿ: ತಾಲ್ಲೂಕಿನ ಬೆಳ್ತಂಗಡಿ ನಗರ, ಉಜಿರೆ, ಮುಂಡಾಜೆ, ಸೋಮಂತಡ್ಕ, ಕಕ್ಕಿಂಜೆ, ಧರ್ಮಸ್ಥಳ ಮುಂತಾದ ಕಡೆ ಮಂಗಳವಾರ ಸಂಜೆ ಭಾರಿ ಗಾಳಿ–ಮಳೆಯಾಗಿದೆ.

ಮುಂಡಾಜೆ ಗ್ರಾಮದ ಸೀಟು ರಸ್ತೆಯಲ್ಲಿ ಭಾರಿ ಗಾತ್ರದ ಮರ ಬಿದ್ದು ಪುಂಜಾಲಕಟ್ಟೆ– ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ತಾಸು ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ಸ್ಥಳಕ್ಕೆ ದಾವಿಸಿದ ಮೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಮರ ಹಾಗೂ ವಿದ್ಯುತ್ ತಂತಿ ತೆರವು ಮಾಡಿದರು.

ರಾಷ್ಟ್ರೀಯ ಹೆದ್ದಾರಿಯ ಚರಂಡಿ ಕಾಮಗಾರಿ ನಡೆಯದೆ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಸವಾರರು ಸಮಸ್ಯೆ ಎದುರಿಸಿದರು.

ದಿಡುಪೆ- ಸೋಮಂತಡ್ಕ ರಸ್ತೆಯ ಮಸೀದಿ ಬಳಿಯ ಗ್ಯಾರೇಜ್ನಲ್ಲಿದ್ದ ಕಾರೊಂದರ ಮೇಲೆ ಮಳೆ ಮರ ಉರುಳಿ ಹಾನಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1124237854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.