ಬೆಳ್ತಂಗಡಿ: ತಾಲ್ಲೂಕಿನ ಮಸೀದಿ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿ ಕೊಂಡರು. ಕಾಜೂರು ರಹ್ಮಾನಿಯ ಜುಮಾ ಮಸೀದಿಯಲ್ಲಿ ಸೌಹಾರ್ದ, ಸಮೃದ್ಧಿ ಮತ್ತು ಶಾಂತಿಯ ಸಂದೇಶವನ್ನು ಪಸರಿಸಲಿ ಎಂಬ ಸಂದೇಶದೊಂದಿಗೆ ಹಬ್ಬ ಆಚರಿಸಲಾಯಿತು.

ನಮಾಝ್ ಮತ್ತು ಪ್ರಾರ್ಥನಾ ಕಾರ್ಯಕ್ರಮಕ್ಕೆ ಸಹಾಯಕ ಇಮಾಂ ಅಬ್ದುಲ್ ಅಝೀಝ್ ಸಖಾಫಿ ನೇತೃತ್ವ ನೀಡಿದರು. ಬಳಿಕ ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದಿಕ್ ಕಾಜೂರು, ಕೋಶಾಧಿಕಾರಿ ಡಿ.ವೈ. ಉಮರ್, ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಅಹ್ಸನಿ, ಸಮಿತಿ ಸದಸ್ಯರು, ಜಮಾಅತ್ ಹಿರಿಯರು, ಉಲಮಾ, ಉಮರಾ ನಾಯ ಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಳ್ತಂಗಡಿ ಖಿಳರ್ ಜುಮಾ ಮಸೀದಿಯಲ್ಲಿ ಖತೀಬ್ ಹನೀಪ್ ಫೈಝಿ ನೇತೃತ್ವದಲ್ಲಿ ನಮಾಜ್ ನೆರವೇರಿಸಿದರು. ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ರಝಾಕ್ ಬಿ.ಎಚ್., ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಬಿ.ಶೇಕುಞಿ, ಬದ್ರುದ್ದೀನ್, ಜತೆ ಕಾರ್ಯದರ್ಶಿಗಳಾದ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಜಮಾಅತ್ ಸದಸ್ಯರು ಭಾಗವಹಿಸಿದ್ದರು.

ಮುಂಡಾಜೆ ಜಮಾಲುಲ್ಲೈಲಿ ಸುನ್ನಿ ಜುಮಾ ಮಸೀದಿಯಲ್ಲಿ ಖುತುಬಾ ಪಾರಾಯಣ ಮತ್ತು ಪೆರ್ನಾಲ್ ನಮಾಜ್ನ ನೇತೃತ್ವವನ್ನು ಖತೀಬ್ ಉಸ್ತಾದ್ ಸಿರಾಜುದ್ದೀನ್ ಸಅದಿ ಗಡಿಯಾರ್ ವಹಿಸಿದ್ದರು.

ಸದರ್ ಉಸ್ತಾದ್ ತ್ವಾಹಿರ್ ಸಅದಿ ನಾವೂರು ಸಹಕಾರ ನೀಡಿದರು.

6 ತಿಂಗಳಿನಿಂದ ಬೆಳಿಗ್ಗೆ ಮತ್ತು ಇಶಾ ನಮಾಜ್ನಲ್ಲಿ ಪಾಲ್ಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿಗಳಾದ ಅಮಾನ್ ಮತ್ತು ಮುಹಮ್ಮದ್ ಶಾಝಿನ್ ಅವರಿಗೆ, ಎಲ್ಲಾ ದಿನ ತರಾವೀಹ್ ನಮಾಜ್ನಲ್ಲಿ ಭಾಗವಹಿಸಿದ ಜಮಾಅತ್ನ ಹಿರಿಯರಾದ ಹಾಜಬ್ಬ ಸಿ., ಬಾವಾಕ ಬೆಳಾಲ್, ಉಮರಬ್ಬ ಕನ್ಯಾಡಿ, ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಶುಜಾಹ್ ಅವರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೆ.ಯು. ಮುಹಮ್ಮದ್ ಸಖಾಫಿ, ಸಯ್ಯದ್ ಸಿನಾನ್ ಜಮಾಲುಲ್ಲೈಲಿ ತಂಙಳ್, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿದರು.

ಸಯ್ಯದ್ ಸಿನಾನ್ ಜಮಲುಲ್ಲೈಲಿ ತಂಙಳ್, ಸಮಿತಿ ಪದಾಧಿಕಾರಿಗಳು, ಎಸ್ಬಿಎಸ್, ಎಸ್ವೈಎಸ್, ಎಸ್ಎಸ್ ಎಫ್, ಕೆಎಂಜೆಯ ಅಧ್ಯಕ್ಷರು, ಪದಾಧಿಕಾ ರಿಗಳು ಭಾಗವಹಿಸಿದ್ದರು. ವೇಣೂರು ಪಡ್ಡಂದಡ್ಕ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಖತೀಬ್ ಖಲಂದರ್ ಶಾಫಿ ಭಾಕವಿ ಅಲ್ ಮನ್ನಾನಿ ಕುತುಭ ಪಾರಾಯಣ ನಮಾಜ್ನ ನೇತೃತ್ವ ವಹಿಸಿದ್ದರು.

ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಪತ್ರಕರ್ತ ಎಚ್. ಮಹಮ್ಮದ್ ವೇಣೂರು, ಪ್ರಧಾನ ಕಾರ್ಯದರ್ಶಿ ರಫೀಕ್, ಪ್ರಮುಖರಾದ ಖಾಲಿದ್ ಪುಲಾಬೆ, ಮಹಮೂದ್ ಪಿ.ಜೆ., ಅಬ್ದುಸಲಾಂ ಶಾಂತಿ ನಗರ, ನಜೀರ್ ಪೆರಿಂಜೆ, ಇರ್ಫಾನ್ ಯು.ಕೆ., ಅಶ್ರಫ್ ಶಾಂತಿನಗರ, ಅಶ್ರಫ್ ಗಾಂಧಿನಗರ, ಶರಪುದ್ದೀನ್ ತಂಙಲ್, ಮೊಹಮ್ಮದ್ ಶಾಫಿ ಕಿರೋಡಿ, ಅಶ್ರಫ್ ಕಿರೋಡಿ, ಇಸ್ಮಾಯಿಲ್ ಎಚ್.ಗಾಂಧಿನಗರ, ಯಾಕೂಬ್ ಪುಲಾಬೆ, ಜಮಾಅತ್ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.