ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಪೊಸರಡ್ಕ ಶ್ರೀದೈವ, ಶ್ರೀಕೊಡಮಣಿತ್ತಾಯ, ಶ್ರೀವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ಮೇ 1ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕದ ಅಂಗವಾಗಿ ಮಂಗಳವಾರ ಮರೋಡಿ ಉಮಾಮಹೇಶ್ವರ ದೇವಸ್ಥಾನದಿಂದ ಪೊಸರಡ್ಕ ಕ್ಷೇತ್ರಕ್ಕೆ ಶೋಭಾಯಾತ್ರೆ ಮೂಲಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಧರ್ಮಸ್ಥಳದಿಂದ 20 ಕ್ವಿಂಟಲ್ ಬೆಳ್ತಿಗೆ ಅಕ್ಕಿ, ಒಂದು ಕ್ವಿಂಟಲ್ ಬೆಲ್ಲ, ಸಕ್ಕರೆ 72 ಕ್ವಿಂಟಲ್ ತರಕಾರಿಗಳನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸೂಚನೆಯಂತೆ ನೀಡಲಾಯಿತು. ಭಕ್ತರು ನೀಡಿದ ಅಕ್ಕಿ, ತೆಂಗಿನಕಾಯಿ, ತರಕಾರಿ, ಅಡುಗೆ ಸಾಮಗ್ರಿಗಳನ್ನು ವಾಹನಗಳಲ್ಲಿ ಸನ್ನಿಧಿಗೆ ತರಲಾಯಿತು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಹೇಮರಾಜ್ ಕೆ., ರಾಜೇಂದ್ರ ಬಲ್ಲಾಲ್, ಅಧ್ಯಕ್ಷ ಜಯವರ್ಮ ಬುಣ್ಣು, ಪ್ರಧಾನ ಕಾರ್ಯ ದರ್ಶಿ ಆದಿತ್ಯ ಪಿ.ಕೆ., ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಎಸ್.ಪೂಜಾರಿ, ನಾರಾಯಣ ಪೂಜಾರಿ ಉಚೂರು, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಪ್ರಮುಖರಾದ ಸತೀಶ್ ಕೆ.ಕಾಶಿಪಟ್ಟ, ಜಯಂತ್ ಕೋಟ್ಯಾನ್, ಸುದರ್ಶನ ಜೈನ್ ಪಾಡಿಬೆಟ್ಟುಗುತ್ತು ಭಾಗವಹಿಸಿದ್ದರು. ಚೆಂಡೆ, ಕುಣಿತ ಭಜನೆ, ಬ್ಯಾಂಡ್ಗಳೂ ಮೆರವಣಿಗೆಯಲ್ಲಿ ಸಾಗಿ ಬಂದವು.

ಧಾರ್ಮಿಕ ವಿಧಿವಿಧಾನಗಳಲ್ಲಿ ಬೆಳಿಗ್ಗೆ ಋತಿಜ್ವರ ಸ್ವಾಗತ, ಆಲಯ ಪರಿ ಗ್ರಹ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ಸಂಜೆ 5ರಿಂದ ಸಪ್ತಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ಮಂಚಾಧಿವಾಸ, ಬಿಂಬಾಧಿವಾಸ ನಡೆಯಿತು. ನಾಟಕ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-29-569743431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.