ಬೆಳ್ತಂಗಡಿ: ‘ದಾದಿಯರು ಆಸ್ಪತ್ರೆಯ ಆಧಾರ ಸ್ತಂಭಗಳು. ಅವರು ಮಾಡುವ ಸೇವೆ ಪೂಜೆಗೆ ಸಮಾನ. ವೈದ್ಯರು ರೋಗಿಗಳಿಗೆ ಔಷಧಿ, ಶುಶ್ರೂಷೆ ಬಗ್ಗೆ ಸಲಹೆ ಸೂಚನೆ ಕೊಡಬಹುದು. ಅದನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ದಾದಿಯರದ್ದು’ ಎಂದು ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಹೇಳಿದರು.

ಉಜಿರೆಯ ಬೆನಕ ಹೆಲ್ತ್ ಸೆಂಟರ್ನಲ್ಲಿ ಆಚರಿಸಲಾದ ಅಂತರರಾಷ್ಟ್ರೀಯ ದಾದಿಯರ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಸ್ಟರ್ ಲಿನ್ಸಿ ಅವರು ಜ್ಯೋತಿ ಹಸ್ತಾಂತರಿಸಿ ದಾದಿಯರಿಗೆ ಕರ್ತವ್ಯದ ಪ್ರತಿಜ್ಞಾ ವಿಧಿ ಬೋಧಿಸಿದರು. ಆಸ್ಪತ್ರೆಯ ಸಹಾಯಕ ನರ್ಸಿಂಗ್ ಸೂಪರಿಂಟೆಂಡೆಂಟ್ ವಸಂತ ಕುಮಾರಿ ದಿನದ ಮಹತ್ವ, ಆಚರಣೆಯ ಉದ್ದೇಶ ವಿವರಿಸಿದರು. ಪ್ರಧಾನ ವ್ಯವಸ್ಥಾಪಕ ದೇವಸ್ಯ ವರ್ಗೀಸ್ ಅವರು ದಾದಿಯರು ಅನುಸರಿಸಬೇಕಾದ ಕರ್ತವ್ಯ, ರೋಗಿಗಳ ಸೇವೆಯಲ್ಲಿ ಅವರ ಪಾತ್ರದ ಬಗ್ಗೆ ಮಾತನಾಡಿದರು.

ದಾದಿಯರಾದ ಉಷಾ ಗೌಡ, ನಳಿನಾಕ್ಷಿ, ಕೇಶವತಿ ಅವರನ್ನು ಗೌರವಿಸಲಾಯಿತು. ಡಾ. ಭಾರತಿ ಜಿ.ಕೆ, ಡಾ. ಆದಿತ್ಯ ರಾವ್, ಡಾ. ಅಂಕಿತಾ ಜಿ. ಭಟ್, ಡಾ. ಶ್ರೇಯಸ್ ಭಾಗವಹಿಸಿದ್ದರು. ಸಿಸ್ಟರ್ ಮಿಥ್ಯಶ್ರೀ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-294376474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.