ಬೆಳ್ತಂಗಡಿ: ‘ಭಕ್ತರು ಮನಸ್ಸು ಮಾಡಿದರೆ ಪಾಳುಬಿದ್ದ ಗುಡಿಯನ್ನು ಅದ್ಭುತವಾಗಿ ಪುನರ್ನಿರ್ಮಾಣ ಮಾಡಲು ಸಾಧ್ಯ ಎಂಬುದಕ್ಕೆ ಮರೋಡಿಯ ಪೊಸರಡ್ಕ ಕ್ಷೇತ್ರ ಸಾಕ್ಷಿ. ಆ ಮೂಲಕ ಭಕ್ತಿ, ಶ್ರದ್ಧೆಯ ಕಾಯಕದ ದ್ಯೋತಕವನ್ನು ಪೊಸರಡ್ಕದಲ್ಲಿ ಕಾಣಬಹುದು’ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.

ಅವರು ಮಂಗಳವಾರ ಮರೋಡಿ ಪೊಸರಡ್ಕದ ಶ್ರೀದೈವ, ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಮೊದಲ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಮಾತನಾಡಿ, ‘ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಊರಿಗೆ ಸುಭೀಕ್ಷೆ ತರುತ್ತದೆ. ಅಜಿಲ ಸೀಮೆಗೆ ಒಳಪಟ್ಟ 32 ಗ್ರಾಮಗಳಲ್ಲೂ ದೈವ, ದೇವರ ಗುಡಿ, ದೇವಾಲಯಗಳು ಜೀರ್ಣೋದ್ಧಾರವಾಗುತ್ತಿರುವುದು ಸಂತೋಷದ ವಿಚಾರ. ಮರೋಡಿ ಪೊಸರಡ್ಕದ ದೈವಸ್ಥಾನಗಳು, ಗರಡಿ 500 ವರ್ಷ ಬಾಳುವಷ್ಟು ಸದೃಢವಾಗಿ ನಿರ್ಮಾಣವಾಗಿದೆ’ ಎಂದರು.

ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿ, ‘ದೈವಸ್ಥಾನ, ದೇವಸ್ಥಾನಗಳ ಕಾರ್ಯಗಳಲ್ಲಿ ಕೇಸರಿ ಬೇಡ. ಅಲ್ಲಿ ಬೇಕಾಗಿರುವುದು ಶುಭ್ರ ಸಾತ್ವಿಕ ಬಣ್ಣ. ಅದನ್ನು ಪೊಸರಡ್ಕದಲ್ಲಿ ಕಾಣುವಂತಾಗಿದೆ. ಕೇಸರಿ ಸನ್ಯಾಸಿಗಳಿಗೆ ಮಾತ್ರ ಬೇಕಾಗಿರುವುದು’ ಎಂದರು.

ಮರೋಡಿ ಉಮಾಮೇಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿದರು.

ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಜಯ ಕುಮಾರ್ ಬಂಗ ಮರೋಡಿ, ಆಡಳಿತ ಸಮಿತಿ ಗೌರವಾಧ್ಯಕ್ಷ ರಾಜೇಂದ್ರ ಬಲ್ಲಾಳ್, ಅಧ್ಯಕ್ಷ ಜಯವರ್ಮ ಬುಣ್ಣು, ಸದಸ್ಯರಾದ ಸುದರ್ಶನ ಜೈನ್ ಪಾಂಡಿಬೆಟ್ಟು ಗುತ್ತು, ರವೀಂದ್ರ ಪೂಜಾರಿ ನಾಪ, ರಮೇಶ್ ಬಲಂತ್ಯರೊಟ್ಟು, ಪ್ರಮುಖರಾದ ರವೀಂದ್ರ ಹೆಗ್ಡೆ ನಡುಚ್ಚೂರು, ಸತೀಶ್ ಪೂಜಾರಿ ಪೊಸರಡ್ಕ, ನಾರಾಯಣ ಪೂಜಾರಿ ದೋಟ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಗೋಪಾಲ ಶೇರಿಗಾರ, ಹರಿಣಿ ಕರುಣಾಕರ ಪೂಜಾರಿ, ಯುವರಾಜ ಜೈನ್ ಸಂತೃಪ್ತಿ ಭಾಗವಹಿಸಿದ್ದರು.

ಧನ್ವಿತಾ ಹೆಗ್ಡೆ, ಹಿತ ಪ್ರಾರ್ಥಿಸಿದರು. ಆಡಳಿತ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ. ಬೆಳ್ಳಿಬೀಡು ಸ್ವಾಗತಿಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ಆದಿತ್ಯ ಪಿ.ಕೆ. ಪ್ತಾಸ್ತಾವಿಕ ಮಾತನಾಡಿದರು. ಕೀರ್ತಿ ಆಚಾರ್ಯ ಕೊಕ್ರಾಡಿ ನಿರೂಪಿಸಿದರು. ಬ್ರಹ್ಮಕುಂಭಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್ ವಂದಿಸಿದರು.

ಇಂದಿನ ಕಾರ್ಯಕ್ರಮಗಳು: ಬೆಳಿಗ್ಗೆ 7ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭ. 9ಕ್ಕೆ ಬ್ರಹ್ಮಕುಂಭಾಭಿಷೇಕ, 10.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 11.30ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮುಖಂಡ ನಳಿನ್ ಕುಮಾರ್ ಕಟೀಲ್, ಗಣ್ಯರು ಭಾಗವಹಿಸುವರು. ಸಂಜೆ 6.30ರಿಂದ ಭರತನಾಟ್ಯ, ಜಾನಪದ ನೃತ್ಯ, ರಾತ್ರಿ 7.30ರಿಂದ ಶ್ರೀ ದೈವದ ನೇಮೋತ್ಸವ, 10ರಿಂದ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-29-1642832786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.