ಬೆಳ್ತಂಗಡಿ: ಪುಂಜಾಲಕಟ್ಟೆ– ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಪ್ರಯುಕ್ತ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಲ್ಲಿನ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಮೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ನಿಲುಗಡೆ ಇರಲಿದೆ.

ವಾಣಿ ಶಾಲೆ, ಚರ್ಟ್ ರಸ್ತೆ, ರೆಂಕೆದಗುತ್ತು, ಸಂತೆಕಟ್ಟೆ, ಜೂನಿಯರ್ ಕಾಲೇಜು, ಬೆಳ್ತಂಗಡಿ ಪೇಟೆ, ಸುಧೆಮುಗೇರು, ಲಾಯಿಲ, ಕಾಶಿಬೆಟ್ಟು, ನಡ, ನಾವೂರು, ಇಂದಬೆಟ್ಟು, ಕೊಲ್ಲಿ ಪರಿಸರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳ್ತಂಗಡಿಯಿಂದ ಧರ್ಮಸ್ಥಳವರೆಗಿನ 33 ಕೆ.ವಿ ಲೈನ್ಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇರುವುದರಿಂದ ಧರ್ಮಸ್ಥಳ ದೇವಸ್ಥಾನ, ಕನ್ಯಾಡಿ, ನಿಡ್ಲೆ, ಪುದುವೆಟ್ಟು, ಪಟ್ರಮೆ, ಅರಸಿನಮಕ್ಕಿ ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ.

ಉಜಿರೆ ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಕೆಲವು ಸ್ಥಳಗಳಲ್ಲಿ 8ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ನಿಲುಗಡೆ ಇರಲಿದೆ. 33 ಕೆ.ವಿ. ಕಕ್ಕಿಂಜೆ ಹಾಗೂ 33 ಕೆ.ವಿ. ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಇರುವುದರಿಂದ 33 ಕೆ.ವಿ. ಪೆಟ್ರೋನೆಟ್ ಸ್ಥಾವರ, 33 ಕೆ.ವಿ. ಎಚ್ಪಿಸಿಎಲ್ ಸ್ಥಾವರ, ತೋಟತ್ತಾಡಿ, ಚಿಬಿದ್ರೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ, ಕಲ್ಮಂಜ ದಿಡುಪೆ, ಕೊಲ್ಲಿ ಮೊದಲಾದ ಭಾಗಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-29-1205311110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.