ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಕಮಿಷನ್‌ ದಂಧೆಗೆ ಮಂಡಳಿಯ ನಿಧಿ ಬಲಿ

ಬೆಳ್ತಂಗಡಿ: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಪ್ರತಿಭಟನೆ
Last Updated 23 ಜೂನ್ 2022, 2:39 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಕಾರ್ಮಿಕರ ಅವಿರತ ಹೋರಾಟದ ಫಲವಾಗಿ ರಚನೆಯಾದ ಕಲ್ಯಾಣ ಮಂಡಳಿಯು ಇಂದು ಲೂಟಿಕೋರರಿಂದ ನಾಶ ಆಗುತ್ತಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಉಪಯೋಗವಾಗಬೇಕಿದ್ದ ಮಂಡಳಿಯ ನಿಧಿ ‌ಕಮಿಷನ್‌ ಹೊಡೆಯುವ ದಂಧೆಗೆ ಬಲಿಯಾಗುತ್ತಿದೆ’ ಎಂದು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಭಟ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ತಂಗಡಿ ಕಾರ್ಮಿಕ ಇಲಾಖೆ ಕಚೇರಿ ಎದುರು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಬೆಳ್ತಂಗಡಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಿಐಟಿಯು ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ಎಲ್. ಮಂಜುನಾಥ್ ಮಾತನಾಡಿ, ‘ಇಂದಿನ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ನ್ಯಾಯ ಕೊಡಿಸುವ ಕೆಲಸಕ್ಕಿಂತ ಹೆಚ್ಚು ಜನರಲ್ಲೇ ಅನ್ಯಾಯದ ಕೆಲಸ ಮಾಡುತ್ತಾ ಧರ್ಮ ರಾಜಕೀಯ ನಡೆಸುವುದರಲ್ಲೇ ತಲ್ಲೀನವಾಗಿದೆ’ ಎಂದು ಟೀಕಿಸಿದರು.

ನಾರಾಯಣ, ನೆಬಿಸ, ಜಯರಾಮ ಮಯ್ಯ, ಜಯಶ್ರೀ, ಭವ್ಯಾ, ಪುಷ್ಪಾ, ಕುಮಾರಿ, ಸುಜಾತಾ, ಜನಾರ್ದನ ಆಚಾರ್‌ ಇದ್ದರು.ಲಾರೆನ್ಸ್ ಸ್ವಾಗತಿಸಿದರು. ಯುವರಾಜ ವಂದಿಸಿದರು.

ಅಂಬೇಡ್ಕರ್ ಭವನದಲ್ಲಿ ಸಮಾವೇಶ ನಡೆಸಿ ನಂತರ ಮೆರವಣಿಗೆಯಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT