ಬೆಳ್ತಂಗಡಿ: ತಾಲ್ಲೂಕಿನ ಗುರುವಾಯನಕೆರೆ, ಅಲಾದಿಕೊಟ್ಟಿಗೆ ಎಂಬಲ್ಲಿ ಯುವಕನ ಮೃತದೇಹವೊಂದು ಸೋಮವಾರ ಪತ್ತೆಯಾಗಿದೆ. ಮೃತ ಯುವಕನಿಗೆ ಮೂವರು ವ್ಯಕ್ತಿಗಳು ಸೇರಿಕೊಂಡು ಭಾನುವಾರ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆ ಮೂವರನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಪೆರ್ನೆ ನಿವಾಸಿ ಯತೀಶ (33) ಮೃತ ಯುವಕ. ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಬಂಧಿತ ಯುವಕರು. ಮೃತ ಯುವಕನ ಸಹೋದರ ನಿತಿನ್ ದೂರು ನೀಡಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಹಲ್ಲೆ) ಹಾಗೂ ಸೆಕ್ಷನ್ 103 (ಕೊಲೆ) ಅಡಿ ಎಫ್ಐಆರ್ ದಾಖಲಾಗಿದೆ.

‘ಗುರುವಾಯನಕೆರೆ, ಅಲಾದಿಕೊಟ್ಟಿಗೆ ಎಂಬಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾದ ಬಗ್ಗೆ ನಿತಿನ್ ಅವರ ಮೊಬೈಲ್ಗೆ ಮಾಹಿತಿ ಮತ್ತು ಮೃತ ವ್ಯಕ್ತಿಯ ಭಾವಚಿತ್ರ ಸೋಮವಾರ ಬೆಳಿಗ್ಗೆ ಬಂದಿತ್ತು. ಆ ಭಾವಚಿತ್ರದಲ್ಲಿದ್ದ ವ್ಯಕ್ತಿಯು ತನ್ನ ಸಹೋದರ ಯತೀಶ್ ಎಂದು ಗೊತ್ತಾಗುತ್ತಿದ್ದಂತೆಯೇ ನಿತಿನ್ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಘಟನಾ ಸ್ಥಳದ ಬಳಿ ಇದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಗ ಯಶೋಧರ, ಇಬ್ರಾಹಿಂ ಹಾಗೂ ಮೋಹನ್ ಸೇರಿಕೊಂಡು ಯತೀಶ್ಗೆ ಹಲ್ಲೆ ನಡೆಸಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.