ಬೆಳ್ತಂಗಡಿ: ‘ಶ್ರೀಮಂತಿಕೆ ಎಷ್ಟೇ ಇದ್ದರೂ ಮಾನಸಿಕ ನೆಮ್ಮದಿಗೆ ಧಾರ್ಮಿಕ ಶ್ರದ್ಧಾಕೇಂದ್ರಗಳ ಅಗತ್ಯವಿದೆ. ಯುವಜನತೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು’ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಮರೋಡಿ ಪೊಸರಡ್ಕ ಶ್ರೀದೈವ, ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕ ಸಂಭ್ರಮದ ಮೂರನೇ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸದಾನಂದ ಪೂಜಾರಿ ಮಾತನಾಡಿ, ‘ದೈವತ್ವದ ಆರಾಧನೆಯು ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ’ ಎಂದರು.

ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ.ಬೆಳ್ಳಿಬೀಡು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಕೆ.ಅಭಯಚಂದ್ರ ಜೈನ್, ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಅರಮಲೆ ಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್, ಪ್ರಮುಖರಾದ ಜ್ಯೋತಿ ಸಾಲ್ಯಾನ್, ಯಮುನಾ ಗೋಪು ಪೂಜಾರಿ, ಸನತ್ ಕುಮಾರ್ ಹೆಗ್ಡೆ, ದಯಾನಂದ ಬಂಗೇರ, ಜಯರಾಜ್ ಕಾಬಯ ಅಂಗಡಿಬೆಟ್ಟು ಗುತ್ತು, ಶೀತಲ್ ಕುಮಾರ್ ಜೈನ್, ಸದಾನಂದ ಹೆಗ್ಡೆ ಕೋಡಿಚ್ಚೂರು, ಎಂ.ಪದ್ಮರಾಜ ಶೆಟ್ಟಿ, ದಿವಾಕರ ಹೆಗ್ಡೆ, ದೇಜಮ್ಮ ಗಾಂದ್ಯೊಟ್ಟ, ಸನತ್ ಕುಮಾರ್ ಜೈನ್, ಶಶಿಕಾಂತ್ ಜೈನ್, ಜಯವರ್ಮ ಬುಣ್ಣು, ರಾಜೇಂದ್ರ ಬಳ್ಳಾಲ್, ಎಂ.ಎಸ್.ಪೂಜಾರಿ, ನಾರಾಯಣ ಪೂಜಾರಿ ಭಾಗವಹಿಸಿದ್ದರು.

ಸುಮಂತ್ ಕುಮಾರ್ ಜೈನ್, ಡಾ.ಸದಾನಂದ ಪೂಜಾರಿ, ಜಯರಾಜ ಕಾಬಯ ಅಂಗಡಿಬೆಟ್ಟು ಗುತ್ತು ಮರೋಡಿ, ಸದಾನಂದ ಹೆಗ್ಡೆ ಕೋಡಿಚೂರು ಮರೋಡಿ, ಎಂ.ಪದ್ಮರಾಜ ಶೆಟ್ಟಿ, ಚಂದ್ರ ವಿಹಾರ ಮರೋಡಿ, ದಿವಾಕರ ಹೆಗ್ಡೆ, ಮಯೂರ ನಡುಚೂರು ಮರೋಡಿ ಅವರನ್ನು ಸನ್ಮಾನಿಸಲಾಯಿತು.

ಮಾನ್ವಿ ಸಂತೋಷ್ ಪ್ರಾರ್ಥಿಸಿದರು. ಶುಭರಾಜ್ ಹೆಗ್ಡೆ ಸ್ವಾಗತಿಸಿ, ಆದಿತ್ಯ ಪಿ.ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಸ ಮರೋಡಿ ವಂದಿಸಿದರು. ಸೌಮ್ಯ ಕೋಟ್ಯಾನ್ ಕೋಟೆಬಾಗಿಲು ಕಾರ್ಯಕ್ರಮ ನಿರ್ವಹಿಸಿದರು.

ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀದೈವದ ನೇಮೋತ್ಸವ, ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-29-1951933462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.