ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಿಂದ ಶಿವಪಂಚಾಕ್ಷರಿ ಭಜನಾ ಸಪ್ತಾಹ

ಸಾಲೆತ್ತೂರು ನವಚೇತನ ಯುವಕ ಮಂಡಲ
Last Updated 18 ಜನವರಿ 2019, 10:53 IST
ಅಕ್ಷರ ಗಾತ್ರ

ವಿಟ್ಲ: ಸಾಲೆತ್ತೂರು ನವಚೇತನ ಯುವಕ ಮಂಡಲ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಶಿವಪಂಚಾಕ್ಷರಿ ಪಾರಾಯಣ, ಅಖಂಡ ಭಜನಾ ಸಪ್ತಾಹ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇದೇ 26ರಿಂದ ಫೆಬ್ರುವರಿ 3ರ ವರೆಗೆ ನಡೆಯಲಿದೆ ಎಂದು ಅಧ್ಯಕ್ಷ ಸೋಮನಾಥ ಪಾಲ್ತಾಜೆ ಹೇಳಿದರು.

ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘26ರಂದು ಬೆಳಿಗ್ಗೆ ಗಣಪತಿ ಹೋಮ, ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಸಾಮೂಹಿಕ ಶಿವಪಂಚಾಕ್ಷರಿ ಪಾರಾಯಣ ನಡೆಯಲಿದೆ. 27ರಂದು ಬೆಳಿಗ್ಗೆ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅಖಂಡ ಭಜನಾ ಸಪ್ತಾಹವನ್ನು ಉದ್ಘಾಟಿಸುವರು. ವಿವಿಧ ಸಂಘಗಳಿಂದ ಭಜನೆ ನಡೆಯಲಿದೆ.

‘ಸಂಜೆ ಸಭೆಯನ್ನು ಸೋಮನಾಥ ಪಾಲ್ತಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಶ್ರೀಕೃಷ್ಣ ಭಜನೆ ಮಹತ್ವ ತಿಳಿಸುವರು. ವಿಶ್ವನಾಥ ಪೂಜಾರಿ ನರ್ಕಳ, ಶಿವರಾಮ ಶೆಟ್ಟಿ ಕೊಲ್ಲಾಡಿ, ವಿದ್ಯೇಶ್ ರೈ ಕಿಲ್ಲಂಬಲೆಪಡ್ಪು, ಶೇಖರ ಪೂಜಾರಿ ಉಳಿಯತ್ತಡ್ಕ, ಗೋಪಾಲ ಸಪಲ್ಯ ಕಲ್ಲಮಜಲು, ಗೋಪಾಲ ಮಾಸ್ತರ್ ದಾರೆಪಡ್ಪು, ಲಕ್ಷ್ಮಣ ಸಪಲ್ಯ ಸಾಲೆತ್ತೂರು, ಧನಂಜಯ ಕಟ್ಟತ್ತಿಲ, ವಿಷ್ಣುಮೂರ್ತಿ, ಮುಖ್ಯ ಅತಿಥಿಗಳಾಗಿರುವರು. ಯುವಕ ಮಂಡಲದ ಹಿರಿಯ ಸದಸ್ಯ ಕೃಷ್ಣಪ್ಪ ಶೆಟ್ಟಿಗಾರ್ ಮಾವೆ ಅವರನ್ನು ಸನ್ಮಾನಿಸಲಾಗುವುದು. ಪ್ರತಿದಿನ ಧಾರ್ಮಿಕ ಸಭೆ ನಡೆಯಲಿದೆ’ ಎಂದರು.

‘30ರಂದು ನಡೆಯುವ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌, ಉದ್ಯಮಿ ಮಾಧವ ಮಾವೆ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಮೇಗಿನಮಲಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಟಿ. ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಗಳಾಗಿರುವರು’ ಎಂದು ತಿಳಿಸಿದರು.

ಗೌರವಾಧ್ಯಕ್ಷ ವೆಂಕಪ್ಪ ಶೆಟ್ಟಿಗಾರ್ ಪಾಲ್ತಾಜೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಬಿ ಶೆಟ್ಟಿಗಾರ್ ಅಗರಿ, ಕೋಶಾಧಿಕಾರಿ ಶೇಖರ ಪೂಜಾರಿ ಮಾವೆ, ಗೌರವ ಸಲಹೆಗಾರ ಶಂಕರ್ ಶೆಟ್ಟಿಗಾರ್ ಮಾವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT