ಬಾವಿಗೆ ಬಿದ್ದು ಸ್ಕೂಟರ್ ಸವಾರ ಸಾವು
ಮಂಗಳೂರು: ಚಲಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿದ್ದು, ಆಯತಪ್ಪಿ ಪಕ್ಕದಲ್ಲೇ ಇದ್ದ ಬಾವಿಗೆ ಬಿದ್ದ ಸವಾರ ಮೃತಪಟ್ಟಿದ್ದಾರೆ.
ನಗರದ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಅಜಿತ್ ಮೃತಪಟ್ಟಿದ್ದಾರೆ. ಸಂಜೆ 7.15ರ ವೇಳೆಗೆ ಬಜಾಲ್ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದ ಸ್ಕೂಟರ್, ಸವಾರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ಆವರಣ ಇರುವ ಬಾವಿಗೆ ಬಿದ್ದಿದ್ದಾರೆ.
ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಬಂದ ಸಿಬ್ಬಂದಿ ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಿಯೇ ಮೃತಪಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಸ್ಥಳ ಎತ್ತರದ ಪ್ರದೇಶವಾಗಿದ್ದರಿಂದ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು, ಬೈಕ್ ಸ್ಕಿಡ್ ಆಗಿದೆ. ಸ್ಕೂಟರ್ ಬಿದ್ದ ಕೆಲ ದೂರದಲ್ಲಿಯೇ ಬಾವಿ ಇದ್ದುದರಿಂದ ಸವಾರ ಬಾವಿಯೊಳಗೆ ಬಿದ್ದಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.