ಮಂಗಳೂರು: ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ರಾಜ್ಯ ಘಟಕ ಬುಧವಾರ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ನಾಯಕರ ಪೈಕಿ ಬಹುತೇಕರು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ವಿಷಯವನ್ನೇ ಮುಂದಿಟ್ಟು ಗುಡುಗಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯೊಂದಿಗೆ ಬಿಜೆಪಿಯ ‘ಆಕ್ರೋಶ’ ಮಧ್ಯಾಹ್ನ ಆರಂಭಗೊಂಡಿತು. 83 ವರ್ಷ ವಯಸ್ಸಿನ ವತ್ಸಲಾ ಕಾಮತ್ ಅವರು ಪಕ್ಷದ ಧ್ವಜವನ್ನು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹಸ್ತಾಂತರಿಸಿದರು. ಗಡಿಯಾರ ಗೋಪುರದ ವರೆಗೆ ಸಾಗಿದ ಮೆರವಣಿಗೆಯ ನಂತರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸಭೆ ನಡೆಯಿತು.

ಹಿಂದೂ ಹೃದಯ ಇರುವುದು ಬೆಂಗಳೂರಿನಲ್ಲಲ್ಲ, ಮಂಗಳೂರಿನಲ್ಲಿ ಎನ್ನುತ್ತಲೇ ಮಾತು ಆರಂಭಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ‘ರಾಜ್ಯದಲ್ಲಿ ಜನಾಕ್ರೋಶ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ನೀಡಿದರೆ ಉಳಿದವರಿಗೆ ಆಕ್ರೋಶ ಬರುವುದಿಲ್ಲವೇ’ ಎಂದು ಪ್ರಶ್ನಿಸಿದರು. ‘ಐದು ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಐದು ವರ್ಷ ಕಾಲ ದೂಡುವ ಹುನ್ನಾರ ಮಾಡಿರುವ ಕಾಂಗ್ರೆಸ್ ಇಲ್ಲಿನ ಹಣವನ್ನು ದೇಶದಲ್ಲಿ ಪಕ್ಷದ ಬೆಳವಣಿಗೆಗೆ ಬಳಸುತ್ತಿದೆ’ ಎಂದು ಅವರು ದೂರಿದರು.

ಬಿ.ವೈ ವಿಜಯೇಂದ್ರ ಮಾತನಾಡಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಸೌಲಭ್ಯಗಳನ್ನು ಒದಗಿಸಲು ತುದಿಗಾಲಲ್ಲಿ ನಿಂತಿದೆ. ಇಲ್ಲಿ ಹಿಂದೂಗಳು ಬದುಕಿಲ್ಲ ಎಂಬುದು ಸರ್ಕಾರದ ಅನಿಸಿಕೆಯೇ ಎಂದು ಪ್ರಶ್ನಿಸಿದರು. ಹಿಂದೂ ಯುವತಿಯರು ಲವ್ ಜಿಹಾದ್ಗೆ ಒಳಗಾಗುತ್ತಿದ್ದರೂ ಸರ್ಕಾರ ಮುಸ್ಲಿಂ ಯುವತಿಯರ ಸ್ವಯಂ ರಕ್ಷಣೆಗೆ ತರಬೇತಿ ನೀಡುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ದೇಶದ್ರೋಹಿ ಮುತ್ತು ನೀಡುತ್ತಾನೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ ಆತನನ್ನು ಗುಂಡಿಕ್ಕಿ ಕೊಲ್ಲುತ್ತಿತ್ತು’ ಎಂದರು.

‘ಸರ್ಕಾರ ಹಿಂದೂಗಳ ಅವಹೇಳನ ಮಾಡುತ್ತ ಮುಸ್ಲಿಮರನ್ನು ಓಲೈಸುತ್ತಿದೆ. ಹನುಮಾನ್ ಚಾಳೀಸ ಹೇಳಿದರೆ ಪೊಲೀಸರಿಂದ ದಾಳಿ ಮಾಡಿಸುತ್ತಿದ್ದು ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳನ್ನು ದಂಡಿಸುತ್ತಿಲ್ಲ’ ಎಂದು ಬಿಜೆಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದರು.

ಮುಖಂಡ ಡಿ.ವಿ ಸದಾನಂದಗೌಡ ಮಾತನಾಡಿ ‘ಸರ್ಕಾರ 48 ಸಾಮಗ್ರಿಗಗಳ ತೆರಿಗೆ ಏರಿಸಿದ್ದು ಅಲಾವುದಿನ್ ಖಿಲ್ಜಿ ಮತ್ತು ಮಹಮ್ಮದ್ ಬಿನ್ ತುಘ್ಲಕ್ ಅವರ ದಾಖಲೆಯನ್ನು ಮುರಿದಿದೆ. ಯುವಕರ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಸರ್ಕಾರ ದನದ ಕೆಚ್ಚಲು ಕೊಯ್ಯುವವರನ್ನು ರಕ್ಷಿಸುತ್ತಿದೆ’ ಎಂದರು.

‘ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲದಕ್ಕೂ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ದಿನದೂಡುತ್ತಿದೆ. ಆದರೆ ಇಲ್ಲಿ ಯಾರ ಜೀವಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ’ ಎಂದ ಮುಖಂಡ ಶ್ರೀರಾಮುಲು ‘ಬಿಜೆಪಿ ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಜಾಗೊಳಿಸಲು ಆಗಲಿಲ್ಲ. ಕಾಂಗ್ರೆಸ್ ತಮಗೆ ಬೇಕಾದವರ ಮೇಲಿನ ಪ್ರಕರಣಗಳನ್ನು ವಜಾಗೊಳಿಸುತ್ತಿದೆ’ ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕಿಶೋರ್ ಕುಮಾರ್ ಬೊಟ್ಯಾಡಿ, ಹರೀಶ್ ಪೂಂಜ, ಮಂಜು, ಮುಖಂಡರಾದ ಅಂಗಾರ, ಪ್ರೀತಂ ಗೌಡ, ಉದಯಕುಮಾರ್ ಶೆಟ್ಟಿ, ರವಿಕುಮಾರ್, ಮುನಿಸ್ವಾಮಿ, ಶರಣ್, ಮೋನಪ್ಪ ಭಂಡಾರಿ, ಯೋಗೀಶ್ ಭಟ್, ಆಶಾ ತಿಮ್ಮಪ್ಪ, ಪ್ರಕಾಶ್ ಕರಿಂಜ, ಸಂಜೀವ ಮಠಂದೂರು, ಬಿಜೆಪಿ ನಗರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಮೇಶ್ ಕಂಡೆಟ್ಟು ಇದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು.

ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ದಪ್ಪ ಚರ್ಮ. ಅದಕ್ಕೆ ಬಿಸಿ ಮುಟ್ಟಲು ತುಂಬ ಸಮಯ ಬೇಕಾಗುತ್ತದೆ. ಗುತ್ತಿಗೆಯಲ್ಲಿ ಶೇಕಡ 4 ಮೀಸಲಾತಿ ನೀಡುವ ಸರ್ಕಾರದ ನಿರ್ಧಾರ ಸಂವಿಧಾನ ವಿರೋಧಿ.
ಕ್ಯಾಪ್ಟನ್ ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಸಂಸದ

‘ಕುರ್ಚಿ ಕಳೆದುಕೊಳ್ಳುವ ಭೀತಿ’

ಕುರ್ಚಿ ಕಳೆದುಕೊಳ್ಳುವ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲೂ ಹೋಗುತ್ತಿಲ್ಲ. ವಿಧಾನಸೌಧದಿಂದ ಆಚೆ ಹೋದರೆ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನವನ್ನು ಕಸಿದುಕೊಳ್ಳುತ್ತಾರೆ ಎಂದು ಹೆದರಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಪ್ರವಾಸ ಮಾಡಿದರೆ ಜನರು ಹಿಡಿದು ಹೊಡೆಯುತ್ತಾರೆ ಎಂಬ ಭಯದಲ್ಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಂತೆ ವರ್ತಿಸದೆ ಕಾಂಗ್ರೆಸ್ ಮುಖ್ಯಮಂತ್ರಿಯಂತಾಗಿದ್ದಾರೆ. ದಕ್ಷಿಣ ಕನ್ನಡದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರದ ಜೊತೆಗೆ ಯಡಿಯೂರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ₹ 19500 ಕೋಟಿ ಬಿಡುಗಡೆ ಮಾಡಿದ್ದರು. ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ₹ 2.85 ಲಕ್ಷ ಕೋಟಿ ನೀಡಿದ್ದು ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ₹ 85000 ಕೋಟಿಯಷ್ಟೇ ಲಭಿಸಿತ್ತು ಎಂದು ಅವರು ದೂರಿದರು.

ಹಾಲಿನ ಬೆಲೆ ಏರಿಕೆ ಪ್ರಯೋಜನ ರೈತರಿಗಿಲ್ಲ

ರಾಜ್ಯದಲ್ಲಿ ಹಾಲಿನ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿದರೂ ಹಾಲುತ್ಪಾದಕ ರೈತರಿಗೆ ಸಿಗುತ್ತಿಲ್ಲ ಎಂದು ಚಲವಾದಿ ನಾರಾಯಣಸ್ವಾಮಿ ದೂರಿದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಅದರಡಿ ಬರಬೇಕಾದ ಹಣವನ್ನು ಕೇಳಿದರೆ ‘ಅದೇನು ತಿಂಗಳ ಸಂಬಳವೇ’ ಎಂದು ಪ್ರಶ್ನಿಸುತ್ತಿದೆ. ಸಂವಿಧಾನವನ್ನು ಬದಲಿಸುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು. ‘ಆಕಸ್ಮಿಕವಾಗಿ ಗೃಹಸಚಿವರಾಗಿರುವ ಪರಮೇಶ್ವರ ಅವರು ಗಂಭೀರ ವಿಷಯಗಳನ್ನೆಲ್ಲ ಲಘುವಾಗಿ ತೆಗೆದುಕೊಂಡಿದ್ದಾರೆ’ ಎಂದು ಶ್ರೀರಾಮುಲು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.