ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗದಲ್ಲಿ ಯಶಸ್ವಿಯಾದ ಬಿಜೆಪಿ

1991 ರಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಅರಳಿದ ಕಮಲ
Last Updated 3 ಮೇ 2019, 17:25 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ನಂತರ ನಡೆದ ಪ್ರಥಮ ಲೋಕಸಭೆ ಚುನಾವಣೆಯಿಂದ, 1991ರವರೆಗೆ ಈಗಿನ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಖ್ಯಾತಿ ಪಡೆದಿತ್ತು.

1952 ರಿಂದ ಸತತವಾಗಿ 9 ಬಾರಿ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌, 1991ರಲ್ಲಿ ಮೊದಲ ಬಾರಿಗೆ ಬಿಜೆಪಿಗೆ ತನ್ನ ಕೋಟೆಯನ್ನು ಬಿಟ್ಟುಕೊಟ್ಟಿತು. 1991ರ ಚುನಾವಣೆಯಲ್ಲಿ ಕರಾವಳಿ ರಾಜಕೀಯದ ಚಿತ್ರಣವೇ ಬದಲಾಯಿತು.

ಈ ಕ್ಷೇತ್ರದಲ್ಲಿ ಸತತ 9 ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 1991ರಿಂದ ನಿರಂತರವಾಗಿ 7 ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 16 ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ, ಬೇರಾವ ಪಕ್ಷಗಳಿಗೆ ಈ ಕ್ಷೇತ್ರದ ಮತದಾರರು ಮಣೆ ಹಾಕಿಲ್ಲ.

1983ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ವಿ.ಧನಂಜಯಕುಮಾರ್ ಅವರಿಗೆ 1989ರಲ್ಲಿ ಪ್ರಥಮ ಬಾರಿಗೆ ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿತ್ತು. ಆದರೆ, ನಿರಂತರ ಗೆಲುವಿನ ನಾಗಾಲೋಟದಲ್ಲಿದ್ದ ಜನಾರ್ದನ ಪೂಜಾರಿ ಅವರ ಎದುರು ಮೊದಲ ಸ್ಪರ್ಧೆಯಲ್ಲಿ ಧನಂಜಯಕುಮಾರ್‌ ಸೋಲು ಅನುಭವಿಸುವಂತಾಯಿತು.

1991ರಲ್ಲಿ ಮತ್ತೊಮ್ಮೆ ಧನಂಜಯಕುಮಾರ್ ಹಾಗೂ ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಮೊದಲ ಚುನಾವಣೆಯಿಂದ ಪಾಠ ಕಲಿತಿದ್ದ ಧನಂಜಯಕುಮಾರ್, ಎರಡನೇ ಪ್ರಯತ್ನದಲ್ಲಿಯೇ ಯಶಸ್ವಿಯಾದರು. ಮೊದಲ ಬಾರಿಗೆ ಕರಾವಳಿಯಲ್ಲಿ ಕಮಲ ಅರಳಿತು.

1991ರ ಚುನಾವಣೆಯ ಬಳಿಕ 1996, 1998, 1999ರಲ್ಲಿ ವಿ. ಧನಂಜಯ್ ಕುಮಾರ್ ಸತತ ಗೆಲುವು ಸಾಧಿಸುತ್ತಲೇ ಬಂದರು. ಇದರ ಜತೆಗೆ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿಯನ್ನೂ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT