ರಕ್ತದಾನ ಶ್ರೇಷ್ಠ ಕಾರ್ಯ: ಜಯಕರ ಶೆಟ್ಟಿ

7
ಬೆಳ್ತಂಗಡಿ : ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ರಕ್ತದಾನ ಶ್ರೇಷ್ಠ ಕಾರ್ಯ: ಜಯಕರ ಶೆಟ್ಟಿ

Published:
Updated:
 ರಕ್ತದಾನ ಶಿಬಿರವನ್ನು ಎಸ್‍ಕೆಡಿಆರ್‍ಡಿಪಿ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಉದ್ಘಾಟಿಸಿದರು.

ಬೆಳ್ತಂಗಡಿ: ‘ರಕ್ತದಾನ ಬದುಕಿನಲ್ಲಿ ನಾವು ಮಾಡುವ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ’ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಹೇಳಿದರು.

ಬೆಳ್ತಂಗಡಿ ಜೇಸಿಐ ಭವನದಲ್ಲಿ ಮಂಜುಶ್ರೀ ಜೇಸಿಐ, ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತು ರಕ್ತ ನಿಧಿ ಕೇಂದ್ರ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಭಾನುವಾರ  ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗದೀಶ್ ಡಿ ಮಾತನಾಡಿ ‘ಸಂಘ ಸಂಸ್ಥೆಗಳ ಈ ರೀತಿಯ ಕಾರ್ಯಗಳಿಂದ ಸಾರ್ವಜನಿಕರಿಗೆ ಪ್ರಯೋಜನವಾಗುವುದು. ಆ ಮೂಲಕ ಸಂಸ್ಥೆಯೊಂದು ಜನಮನ್ನಣೆ ಗಳಿಸಲು ಸಾಧ್ಯ’ ಎಂದರು. ಜೇಸಿಐ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಡಾ. ಆ್ಯಂಟನಿ ಡಿ’ಸೋಜ‌ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ವೆನ್ಲಾಕ್ ಆಸ್ಪತ್ರಯ ಡಾ. ಸುರಬಿ, ಜೇಸಿ ವಲಯಾಧಿಕಾರಿಗಳಾದ ಚಿದಾನಂದ ಇಡ್ಯಾ ಮತ್ತು ವಸಂತ ಶೆಟ್ಟಿ ಶ್ರದ್ಧಾ, ನಿಕಟಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಉಪಸ್ಥಿತರಿದ್ದರು.

ಜೇಸಿ ಸದಸ್ಯ ವಿನ್ಸೆಂಟ್ ಲೋಬೋ ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿದರು. ವಿಜಯ್ ನಿಡಿಗಲ್ ಜೇಸಿವಾಣಿ ಉದ್ಘೋಸಿಸಿದರು. ಕಾರ್ಯದರ್ಶಿ ವಿಶಾಲ್ ಅಗಸ್ಟಿನ್ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಜೇಸಿಐಯ ಪೂರ್ವಾಧ್ಯಕ್ಷರುಗಳು, ಸದಸ್ಯರು, ಔಷಧ ವ್ಯಾರಸ್ಥರ ಸಂಘದ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿಬ್ಬಂದಿ, ಹಾಗೂ ಊರವರು ಸೇರಿದಂತೆ 50ಕ್ಕಿಂತ ಅಧಿಕ ಮಂದಿ ರಕ್ತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !