ವಿಟ್ಲ: ಇಲ್ಲಿಂದ ಮಂಗಳೂರಿಗೆ ತೆರಳುವ ಮುಖ್ಯರಸ್ತೆಯ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಅಭಿವೃದ್ದಿಗೆ ₹60 ಲಕ್ಷ ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸುಮಾರು ಹದಿನೈದು ವರ್ಷಗಳಿಂದ ಇದ್ದ ಇಲ್ಲಿನ ಬಹುದೊಡ್ಡ ಸಮಸ್ಯೆಯೊಂದು ನಿವಾರಣೆಯಾಗಿದೆ. ಬೊಬ್ಬೆಕೇರಿಯಲ್ಲಿ ರಸ್ತೆ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು ಎಂದರು.

ವಾಹನ ಸಂಚರಿಸುವಾಗ ಫುಟ್ಪಾತ್ ಇಲ್ಲದೆ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದು, ಮಳೆಗಾಲದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ವಿಟ್ಲ ಭಾಗದ ಕಾಂಗ್ರೆಸ್ ನಾಯಕರ ಮೂಲಕ ವಿಚಾರ ತಿಳಿದುಕೊಂಡಾಗ ರಸ್ತೆ ಬದಿಯಲ್ಲಿ ಖಾಸಗಿ ಜಾಗವಿದ್ದು ವಿಸ್ತರಣೆಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ ಕೇಳಿಕೊಂಡಿದ್ದೆ. ಆ ಮೂಲಕ ಹದಿನೈದು ವರ್ಷಗಳ ವಿವಾದ ಇತ್ಯರ್ಥವಾಗಿತ್ತು ಎಂದು ಹೇಳಿದರು.

ಕಬಕದಿಂದ ವಿಟ್ಲಕ್ಕೆ ತೆರಳುವ ರಸ್ತೆ ವಿಸ್ತರಣೆ ಕಾಮಗಾರಿಗೆ ₹20 ಕೋಟಿ, ಇದೇ ರಸ್ತೆಯ ಎರಡು ಸೇತುವೆ ಅಭಿವೃದ್ದಿಗೆ ₹10 ಕೋಟಿ ಅನುದಾನ ನೀಡಲಾಗುವುದು ಎಂದರು.

ವಿಟ್ಲ ಪಟ್ಟಣದ ರಸ್ತೆ ವಿಸ್ತರಣೆ ಅಗತ್ಯ: ಪಟ್ಟಣದಲ್ಲಿ ರಸ್ತೆಗಳಿಗೆ ತಾಗಿಕೊಂಡೇ ಕಟ್ಟಡಗಳಿದ್ದು, ರಸ್ತೆ ವಿಸ್ತರಣೆ ಮಾಡುವ ಆಲೋಚನೆ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಂಗಡಿ ಮಾಲೀಕರು, ಕಟ್ಟಡ ಮಾಲೀಕರು ಒಪ್ಪಿಗೆ ನೀಡಿದರೆ ಮಾತ್ರ ಕಾಮಗಾರಿ ನಡೆಯಬಹುದು. ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ. ರಸ್ತೆ ಅಗಲಗೊಂಡರೆ ಪಟ್ಟಣ ದೊಡ್ಡದಾಗಿ ಬೆಳೆಯಲು ಸಾಧ್ಯ. ವರ್ತಕರು, ಮಾಲೀಕರು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

‘ಅಭಿವೃದ್ದಿ ಕೆಲಸ ಕಂಡು ಬೆದರಿದ ಬಿಜೆಪಿಯವರು ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರವಿರುವಾಗ ಅಭಿವೃದ್ದಿ ಮಾಡದ ಮಾಜಿ ಶಾಸಕ ಬೆರಗಾಗಿರುವ ಅವರು ಇದೇ ಕಾರಣಕ್ಕೆ ಬಂಟ್ವಾಳ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ’ ಎಂದು ಆರೋಪಿಸಿದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ರಮನಾಥ ವಿಟ್ಲ, ಮಹಾಲಿಂಗ ನಾಯ್ಕ, ಶ್ರೀನಿವಾಸ ಶೆಟ್ಟಿ, ಹಂಝ ವಿಟ್ಲ, ಹಸೈನರ್ ನೆಲ್ಲಿಗುಡ್ಡೆ, ಡೀಕಯ್ಯ, ಲತಾ ಅಶೋಕ್ ಪೂಜಾರಿ, ಸುನಿತಾ ಕೋಟ್ಯಾನ್, ಜಾನ್ಸನ್ ವಿಟ್ಲ, ಸಂತೋಷ್ ವಿಟ್ಲ, ವಲೇರಿಯನ್ ಮಾರ್ತ, ಉಮೇಶ್, ಹಾರಿಸ್, ಸಿದ್ದಿಕ್, ಶರೀಫ್ ಒಕ್ಕೆತ್ತೂರು, ಶ್ರೀಧರ್ ಬಾಳೆಕಲ್ಲು, ಅಬ್ಬು ನವಗ್ರಾಮ, ಅಶೋಕ್ ಪೂಜಾರಿ, ಎಂ.ಕೆ. ಮೂಸಾ, ಶರೀಫ್ ಸೇರಾಜೆ, ಶೇಕಾಲಿ ಸೇರಾಜೆ, ಉರುಂಬಳ ಅಬ್ದುಲ್ ರಹಿಮಾನ್, ಬೂತ್ ಅಧ್ಯಕ್ಷ ಅಬ್ದುಲ್ ರಹಿಮಾನ್, ರಾಮಣ್ಣ ಪಿಲಿಂಜ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-972873922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.