ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿಗಳು ಬರೆದು ಪ್ರಕಟಿಸಿರುವ ಬಳ್ಪದ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಳ ಮತ್ತು ಸವಣೂರಿನ ಪುದುಬೆಟ್ಟು ಭಗವಾನ್ ಚಂದ್ರನಾಥ ಸ್ವಾಮಿ ಜಿನಮಂದಿರ ಅತಿಶಯ ಕ್ಷೇತ್ರದ ವಿಚಾರಗಳಿಗೆ ಸಂಬಂಧಿಸಿದ ವಿಚಾರಗಳನ್ನೊಳಗೊಂಡ ‘ಮೆಲುಕು’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಗುರುವಾರ ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರು ‘ಮೆಲುಕು’ಕೃತಿ ಬಿಡುಗಡೆಮಾಡಿದರು.

ಬಳ್ಪದ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಹಾಗೂ ಆಡಳಿತ ಮೊಕ್ತೇಸರರಾದ ಶ್ರೀವತ್ಸ ಮೋರಾಜೆ ವಿಷ್ಣುಮೂರ್ತಿ ದೇವಳದ ಸ್ಥಳ ಚಾರಿತ್ರ್ಯವನ್ನು ತಿಳಿಸಿದರು.

ಸವಣೂರು ಪುದುಬೆಟ್ಟು ಜೈನ ಮಂದಿರದ ನಿರ್ವಹಣಾ ಸಮಿತಿ ಅಧ್ಯಕ್ಷ ಶತ್ರುಂಜಯ್ ಜೈನ್ ಅವರು ಇತಿಹಾಸದ ಮಹತ್ವ ಹಾಗೂ ಪುದುಬೆಟ್ಟು ಭಗವಾನ್ ಚಂದ್ರನಾಥ ಸ್ವಾಮಿ ಜಿನಮಂದಿರ ಅತಿಶಯ ಕ್ಷೇತ್ರದ ಸ್ಥಳ ಚಾರಿತ್ರ್ಯವನ್ನು ತಿಳಿಸಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್.ರೈ, ಉಪಪ್ರಾಂಶುಪಾಲ ಶೇಷಗಿರಿ ಎಂ.ಭಾಗವಹಿಸಿದ್ದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕಿ ಪ್ರತಿಭಾ ಎಸ್. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.