ಬ್ರಾಹ್ಮಣ ಸಂಘ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

7

ಬ್ರಾಹ್ಮಣ ಸಂಘ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

Published:
Updated:
ಸುಳ್ಯ ತಾಲ್ಲೂಕು ಬ್ರಾಹ್ಮಣರ ವಿದ್ಯಾರ್ಥಿ ನಿಲಯಕ್ಕೆ ಹೋಗುವ ರಸ್ತೆ ಕಾಂಕ್ರಿಟಿಕರಣ ಮತ್ತು ಇಂಟರ್ ಲಾಕ್ ಅಳವಡಿಸಿದ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಎಸ್.ಅಂಗಾರ ನೆರವೇರಿಸಿದರು. (ಸುಳ್ಯ ಚಿತ್ರ)

ಸುಳ್ಯ: ಶಾಸಕರ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸುಳ್ಯ ತಾಲ್ಲೂಕು ಬ್ರಾಹ್ಮಣರ ವಿದ್ಯಾರ್ಥಿ ನಿಲಯಕ್ಕೆ ಹೋಗುವ ರಸ್ತೆ ಕಾಂಕ್ರಿಟಿಕರಣ ಮತ್ತು ಇಂಟರ್‌ಲಾಕ್ ಟೈಲ್ಸ್ ಅಳವಡಿಸಿದ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಎಸ್.ಅಂಗಾರ ಈಚೆಗೆ ನೆರವೇರಿಸಿದರು.

ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅಂಗಾರ ಅವರನ್ನು ಸನ್ಮಾನಿಸಲಾಯಿತು.

ಸುಳ್ಯ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಡೆಂಕಿರಿ ಅವರು ಅಧ್ಯಕ್ಷತೆ ವಹಿಸಿದರು.

ವೇದಿಕೆಯಲ್ಲಿ ಗೌರವ ಸಲಹೆಗಾರ ಪಾಲೆಪ್ಪಾಡಿ ಗಣಪಯ್ಯ ಭಟ್, ಗೌರವಾಧ್ಯಕ್ಷ ನೆಟ್ಟಾರು ವೆಂಕಟ್ರಮಣ ಭಟ್, ಕಾರ್ಯದರ್ಶಿ ಕೃಷ್ಣ ರಾವ್ ನಾವೂರು, ಉಪಾಧ್ಯಕ್ಷ ಕೆ.ಗಣೇಶ ಶರ್ಮ ಉಪಸ್ಥಿತರಿದ್ದರು.

ಕೋಶಾಧಿಕಾರಿ ಎ. ಭಾಸ್ಕರ ರಾವ್ ಬಯಂಬು ವಂದಿಸಿದರು. ನ್ಯಾಯವಾದಿ ದಳ ಸುಬ್ರಾಯ ಭಟ್ ಮತ್ತು ಸ್ವಾತಿ ಸೋಮಯಾಗಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !