ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರು ಭಯಪಟ್ಟಿದ್ದು ಸಾವರ್ಕರ್‌ಗೆ ಮಾತ್ರ: ಎಂ.ಸುದರ್ಶನ್

Last Updated 16 ಆಗಸ್ಟ್ 2022, 15:02 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದಲ್ಲಿ ಸ್ವಾತಂತ್ರ್ಯ ವೀರ ಎಂಬ ಬಿರುದು ಪಡೆದಿದ್ದು ಸಾವರ್ಕರ್‌ ಮಾತ್ರ. ಎರಡು ಬಾರಿ ಕಾಲಾಪಾನಿ ಶಿಕ್ಷೆ ಅನುಭವಿಸಿದ ಏಕೈಕ ಹೋರಾಟಗಾರ ಅವರು. ಸಾವಿರಾರು ಯುವ ಕ್ರಾಂತಿಕಾರಿಗಳನ್ನು ರೂಪಿಸಿ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಬ್ರಿಟಿಷರು ಭಾರತ ಬಿಟ್ಟು ಹೋಗುವವರೆಗೂ ಭಯಪಟ್ಟಿದ್ದು ಸಾವರ್ಕರ್‌ಗೆ ಮಾತ್ರ’ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ಸಾವರ್ಕರ್‌ ಭಾವಚಿತ್ರ ತೆಗೆಯಲು ಎಸ್‌ಡಿಪಿಐನವರು ಪ್ರಯತ್ನಿಸಿದ್ದನ್ನು ಖಂಡಿಸಿರುವ ಅವರು, ‘ಇದರಿಂದ ಎಸ್‌ಡಿಪಿಐನ ನಿಜಬಣ್ಣ ಬಯಲಾಗಿದೆ‘ ಎಂದು ಹೇಳಿದ್ದಾರೆ.

‘ದೇಶ ವಿಭಜನೆಗೆ ಕಾರಣವಾಗಿದ್ದ ಮುಸ್ಲಿಂ ಲೀಗ್‌ನ ಇನ್ನೊಂದು ಮುಖ ಎಸ್‌ಡಿಪಿಐ. ಮತಾಂಧತೆ ಮೂಲಕ ಅಶಾಂತಿ ಸೃಷ್ಟಿಸುತ್ತಿರುವ ಎಸ್‌ಡಿಪಿಐ ಅನ್ನು ಸರ್ಕಾರ ಮಟ್ಟಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಸಾವರ್ಕರ್‌ ಬಗ್ಗೆ ಹೀನಾಯವಾಗಿ ಮಾತನಾಡುವವರು ಅಂಡಮಾನ್‌ ಜೈಲಿಗೆ ಭೇಟಿ ನೀಡಬೇಕು. ಆಗ ಅವರಿಗೆ ಸತ್ಯದ ಅರಿವಾಗುತ್ತದೆ. ಮತಾಂಧರು ಮೊದಲಿನಿಂದಲೂ ಸಾವರ್ಕರ್‌ ಅವರನ್ನು ಅವಮಾನಿಸುತ್ತಾ ಬಂದಿದ್ದಾರೆ. ದೇಶ ಭಕ್ತ ಸಾವರ್ಕರ್‌ ಅವರನ್ನು ಮತಾಂಧ ಟಿಪ್ಪುವಿಗೆ ಹೋಲಿಕೆ ಮಾಡುವುದು ಖಂಡನೀಯ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅಸಂಖ್ಯಾತ ಹಿಂದೂಗಳನ್ನು ಮತಾಂತರ ಮಾಡಿದ ಹಾಗೂ ಹತ್ಯೆ ಮಾಡಿದ ಟಿಪ್ಪೂ ಇತಿಹಾಸ ಏನೆಂದು ತಿಳಿದಿದೆ. ತುಷ್ಟೀಕರಣ ನೀತಿ ಅನುಸರಿಸುತ್ತಾ ಬಂದ ಕಾಂಗ್ರೆಸ್‌ ಸಾವರ್ಕರ್‌ ಅವರ ಹೋರಾಟಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT