ಬಸ್ ಪಲ್ಟಿ: ಹಲವರಿಗೆ ಗಾಯ

7

ಬಸ್ ಪಲ್ಟಿ: ಹಲವರಿಗೆ ಗಾಯ

Published:
Updated:

ಮಂಗಳೂರು: ನಗರದ ಜೋಕಟ್ಟೆ ತಿರುವ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರ್ಗ ಸಂಖ್ಯೆ 45 'ಡಿ'ಯಲ್ಲಿ ಸಂಚರಿಸುವ ಸೇಂಟ್ ಆಂಟನಿ  ನಗರ ಸಾರಿಗೆ ಬಸ್ ಮಂಗಳವಾರ ಬೆಳಿಗ್ಗೆ ಚಾಲಕನ‌ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಒಟ್ಟು 11 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಬಸ್ ಕಾಟಿಪಳ್ಳ- ಕೈಕಂಬದಿಂದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಬಸ್ ಉರುಳಿಬಿದ್ದಿದೆ. ಇಬ್ಬರಿಗೆ ಮೂಳೆಗಳು‌ ಮುರಿತವಾಗಿದೆ. ಒಂಬತ್ತು ಜನರಿಗೆ ಸಣ್ಣ ಗಾಯಗಳಾಗಿವೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !