ಬಗೆ ಬಗೆಯ ಚಿತ್ತಾರಗಳಲ್ಲಿ ಚಿತ್ರಾ೦ಗಿ

7

ಬಗೆ ಬಗೆಯ ಚಿತ್ತಾರಗಳಲ್ಲಿ ಚಿತ್ರಾ೦ಗಿ

Published:
Updated:

ಚಿತ್ರಾಂಗಿ ಗಿಡವೆಂದರೆ ಚಿಟ್ಟೆಗಳಿಗೆ ಅಚ್ಚುಮೆಚ್ಚು. ಚಿತ್ರಾಂಗಿಯ ಹೂಗಳು ತಮ್ಮ ಗಾಢವಾದ ಹಳದಿ, ಕಿತ್ತಳೆ ಗುಲಾಬಿ ಬಣ್ಣಗಳಿಂದ ಪಾತರಗಿತ್ತಿಗಳನ್ನು ಆಕರ್ಷಿಸುತ್ತವೆ. ಚಿತ್ರಾಂಗಿಯ ವೈಜ್ಞಾನಿಕ ಹೆಸರು ‘ಲ್ಯಾ೦ಟನ ಕ್ಯಾಮರಾ.ಇದರ ಸ್ಥಳೀಯ ಹೆಸರು “ಕಾಡುಗುಲಾಬಿ “.

ಲ್ಯಾ೦ಟನ ಸಾಮನ್ಯವಾಗಿ ಎರಡರಿಂದ ನಾಲ್ಕು ಮೀಟರ್ ನಷ್ಟು ಉದ್ದಕ್ಕೆ ಬೆಳೆಯುತ್ತವೆ. ಇದು ದಟ್ಟವಾಗಿ ಪೊದೆಗಳನ್ನು ನಿರ್ಮಿಸುತ್ತಾ ಹೋಗಿವೆ ಸಸ್ಯ ಪ್ರಕೃತಿಯನ್ನು ಹೊಂದಿದೆ. ಇದರ ಕಾಂಡ ಉದ್ದ ಹಾಗು ದುರ್ಬಲವಾಗಿದ್ದು ಸಣ್ಣ ಭಾರದಲ್ಲಿ ಗೆಲ್ಲುಗಳು ಮುರಿದು ಬೀಳಿತ್ತವೆ. ಗಿಡದ ತುಂಬಾ ಎಲೆಗಳಿದ್ದು , ಎಲೆಗಳ ಮೇಲೈ ಪದರದಲ್ಲಿ ಸಣ್ಣ ಸಣ್ಣ ರೋಮಗಳಂತಿದ್ದು ದೊರಗಾಗಿರುತ್ತದೆ. ಗಿಡದಲ್ಲಿ ಸಣ್ಣ ಸಣ್ಣ ಕಾಯಿಗಳು ಮೊದಲು ಹಸಿರಾಗಿದ್ದು ಆಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇದು ಗೊಂಚಲುಗಳ ರೂಪದಲ್ಲಿರುತ್ತವೆ.

ಲ್ಯಾ೦ಟನ ಹೂಗಳು ಸಾಮಾನ್ಯವಾಗಿ ಇಪ್ಪತೈದರಿಂದ ಐವತ್ತು ಹೂಗಳು ಗುಂಪಾಗಿ ಹುಟ್ಟುತ್ತವೆ. ಹೂಗಳು ವರ್ಷದ ಎಲ್ಲಾ ಅವಧಿಯಲ್ಲೂ ತಮ್ಮ ಇರುವಿಕೆಯನ್ನು ತೋರುತ್ತವೆ. ಈ ಹೂಗಳು ಸಾಮಾನ್ಯವಾಗಿ ಕೆಂಪು ,ಕೇಸರಿ , ಹಳದಿ ಹಾಗು ಬಿಳಿಬಣ್ಣಗಳಿಂದ ಕಂಗೊಳಿಸುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಮಿಶ್ರತಳಿಯಿಂದಾಗಿ ಬೇರೆ ಬೇರೆ ಬಣ್ಣಗಳನ್ನು ಪಡೆದುಕೊಂಡು ಕಂಗೊಳಿಸುತ್ತವೆ.ಈ ಗಿಡಗಳಲ್ಲಿ ೧೩೫ ಪ್ರಭೇಧಗಳನ್ನು ಕಾಣಬಹುದು.

ಇವುಗಳು ಪ್ರಪಂಚದ ಎಲ್ಲ ಭಾಗಗಳಲ್ಲಿ ಕಂಡು ಬಂದರೂ ದಕ್ಷಿಣ ಏಷ್ಯಾ ದಕ್ಷಿಣ ಆಫ್ರಿಕಾದ ಕಾಡುಗಳು ಅಮೇರಿಕಾ ಮಧ್ಯಪ್ರಾಚ್ಯದ ಕರಾವಳಿ ತೀರಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತವೆ. ಭಾರತದ ಪಶ್ಚಿಮ ಘಟ್ಟ ಹಾಗು ಕರಾವಳಿ ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆದಿರುವುದನ್ನು ನಾವು ನೋಡಬಹುದು. ಈ ಹೂಗಳನ್ನು ಅಮೆರಿಕಾ ಹಾಗು ಗಲ್ಫ್ ದೇಶಗಳಲ್ಲಿ ಅಲಂಕಾರಿಕ ಹೂಗಳಾಗಿ ಉಪಯೋಗಿಸುತ್ತಾರೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇದರ ಹೂಗಳು ಚಿಕ್ಕದಿದ್ದರೂ ಮಕರಂದ ಉತ್ಪಾದಿಸುವುದರಲ್ಲಿ ಅಗ್ರ ಸ್ಥಾನ ಪಡೆದಿವೆ. ಮಕರಂದದಲ್ಲಿ ಸಕ್ಕರೆಯ ಅಂಶವು ಅಧಿಕ ಪ್ರಮಾಣದಲ್ಲಿದೆ. ಈ ಮಕರಂಧವನ್ನು ಹೀರುವ ಚಿಟ್ಟೆಗಳು ಪುಟ್ಟ ಮಕ್ಕಳಂತೆ ನಿಂತಲ್ಲಿ ನಿಲ್ಲದೆ ಒಂದು ಹೂವಿನಿಂದ ಮತ್ತೊಂದು ಮಗದೊಂದು ಹೂವಿಗೆ ಹಾರುವ ನೋಟವು ನೋಡಲು ಚೆನ್ನ. ಚಿತ್ರಾ೦ಗಿಯು ಕೇವಲ ಚಿಟ್ಟೆಗಳಿಗೆ ಮಾತ್ರವಲ್ಲ ಚಿಟ್ಟೆಗಳ ಅಧ್ಯಯನ ಮಾಡುವವರಿಗೂ ಬಹಳ ಸಹಕಾರಿಯಾದ ಸಸ್ಯವೆಂಬುದು ಗಮನಾರ್ಹ ವಿಷಯವಾಗಿದೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !