ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಹೈನುಗಾರಿಕೆಯ ಪರಿಚಯ

ಪುತ್ತೂರಿನಲ್ಲಿ ಫೆ.23 ರಿಂದ ನಾಲ್ಕನೇ ಕೃಷಿ ಯಂತ್ರ ಮೇಳ: ಸತೀಶ್ಚಂದ್ರ
Last Updated 3 ಜನವರಿ 2019, 13:26 IST
ಅಕ್ಷರ ಗಾತ್ರ

ಮಂಗಳೂರು: ಕ್ಯಾಂಪ್ಕೊ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜುಗಳ ವತಿಯಿಂದ 4 ನೇ ‘ಕೃಷಿ ಯಂತ್ರ ಮೇಳ-2019’ ಹಾಗೂ ‘ಕನಸಿನ ಮನೆ’ ಬೃಹತ್ ಪ್ರದರ್ಶನವನ್ನು ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆಬ್ರುವರಿ 23 ರಿಂದ 25 ರವರೆಗೆ ಆಯೋಜಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದುವರೆಗೆ ಮೂರು ಯಂತ್ರಮೇಳಗಳು ಈ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದಿವೆ. 2015ರಲ್ಲಿ ನಡೆದ 3 ನೇ ಯಂತ್ರಮೇಳವು ಯಶಸ್ಸನ್ನು ಕಂಡಿದ್ದು, ಸುಮಾರು 2 ಲಕ್ಷ ಜನ ಭೇಟಿ ನೀಡಿದ್ದರು ಎಂದರು.

ದೇಶ– ವಿದೇಶಗಳ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಗತಿಪರ ಕೃಷಿಕರು ತಮ್ಮ ಅನುಭವದ ಆಧಾರದಲ್ಲಿ ತಾವೇ ತಯಾರಿಸಿದ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಕೃಷಿಕರ ಇಂದಿನ ಆವಶ್ಯಕತೆಗಳಿಗೆ ಸ್ಪಂದಿಸುವ ವಿಶೇಷ ಪ್ರಯತ್ನಇದಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ. ಸಾವಯವ ಕೃಷಿಯಿಂದ ಆರೋಗ್ಯ ಭಾಗ್ಯ ಎಂಬ ನಿಟ್ಟಿನಲ್ಲಿ ಸಾವಯವ ಕೃಷಿಯ ಕುರಿತು ಸಮಾಲೋಚನೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಹೈನುಗಾರಿಕೆಗೆ ವಿಶೇಷ ಮಹತ್ವ ನೀಡುವ ನಿಟ್ಟಿನಲ್ಲಿ ಪಶುಪಾಲನೆಗೆ ಬಳಸುವ ನೂತನ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೀಡಿ ಉದ್ಯಮವು ಕಡಿಮೆಯಾಗಿದ್ದು, ಪರ್ಯಾಯವಾಗಿ ಹೈನೋದ್ಯಮವು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಕಡಿಮೆ ವೆಚ್ಚದಲ್ಲಿ ಹಟ್ಟಿಗಳ ನಿರ್ಮಾಣ, ಹಟ್ಟಿಗಳಲ್ಲಿ ರಬ್ಬರ್ ಮ್ಯಾಟ್‌ಗಳ ಬಳಕೆ ಹೀಗೆ ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿಸುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮತ್ತು ಸರ್ಕಾರದ ವಿವಿಧ ಸವಲತ್ತುಗಳ ಬಗ್ಗೆ ತಜ್ಞರಿಂದ ಮಾಹಿತಿಗಳನ್ನು ಒದಗಿಸಲಾಗುತ್ತದೆ ಎಂದು ವಿವರಿಸಿದರು.

ನಮ್ಮ ಬಳಕೆಗೆ ನಮ್ಮ ಹಿತ್ತಿಲಿನಿಂದಲೇ ನಿರಂತರ ತರಕಾರಿ, ಕೃಷಿಕರು ಮೌಲ್ಯವರ್ಧಕರು, ಐಟಿ-ಬಿಟಿಯಿಂದ ಮರಳಿ ಕೃಷಿಗೆ-ಯಶೋಗಾಥೆ, ಹೈನುಗಾರಿಕೆ ಲಾಭದಾಯಕ ಹೇಗೆ?, ಕಡಿಮೆ ವೆಚ್ಚದ ಕನಸಿನ ಮನೆ ನಿರ್ಮಾಣ ವಿಷಯದಲ್ಲಿ ವಿಚಾರಗೋಷ್ಠಿಗಳು ನಡೆಯಲಿವೆ. ಕೃಷಿಕರು, ಸಂಶೋಧಕರ ಮತ್ತು ತಂತ್ರಜ್ಞರನ್ನು ಒಟ್ಟು ಸೇರಿಸಿ ಕೃಷಿಯಲ್ಲಿ ಬರಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್‍ ತಾಂತ್ರಿಕ ಸಹಯೋಗದೊಂದಿಗೆ ಕನಸಿನ ಮನೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಉದ್ದೇಶ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕ ಮಹದೇವ ಶಾಸ್ತ್ರಿ, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಕೃಷಿ ಯಂತ್ರಮೇಳದ ಸಂಯೋಜಕ ಪ್ರೊ.ವಿವೇಕ್‌ ರಂಜನ್ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT