ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಜಾದಿಂದ ಬಂದ ಬಾಡಿಗೆ ವಿಮಾನ

Last Updated 27 ಜೂನ್ 2020, 17:20 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಸ್ಪೋರ್ಟ್‌ ಆಂಡ್‌ ಕಲ್ಚರಲ್ ಕ್ಲಬ್‌ನ ಎರಡನೇ ಖಾಸಗಿ ಬಾಡಿಗೆ ವಿಮಾನವು ಶನಿವಾರ ಬೆಳಿಗ್ಗೆ ಶಾರ್ಜಾದಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಈ ವಿಮಾನದಲ್ಲಿ 18 ಗರ್ಭಿಣಿಯರು, 3 ನವಜಾತ ಶಿಶುಗಳು, 9 ಮಕ್ಕಳು, 8 ಹಿರಿಯ ನಾಗರಿಕರು, 20 ತುರ್ತು ಚಿಕಿತ್ಸಾ ರೋಗಿಗಳೂ ಸೇರಿದಂತೆ 171 ಪ್ರಯಾಣಿಕರೊಂದಿಗೆ ಶಾರ್ಜಾದಿಂದ ಬಂದಿದ್ದಾರೆ. ಏರ್ ಅರೇಬಿಯಾ ವಿಮಾನದ ಮೂಲಕ ಶುಕ್ರವಾರ ರಾತ್ರಿ 1 ಗಂಟೆಗೆ ಶಾರ್ಜಾದಿಂದ ಹೊರಟಿದ್ದು, ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಮಂಗಳೂರಿಗೆ ತಲುಪಿದೆ.

ಕೆಎಸ್‌ಸಿಸಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು. ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕೆಎಸ್‌ಸಿಸಿ ಕ್ಲಬ್ ಪದಾಧಿಕಾರಿಗಳಾದ ಇಸ್ಮಾಯಿಲ್, ಜಾವೇದ್, ಸಫ್ವಾನ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

ನಗರಕ್ಕೆ ಬಂದ ಎಲ್ಲ ಪ್ರಯಾಣಿಕರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಹೋಟೆಲ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT