ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

135 ವರ್ಷದ ಪ್ರಾರ್ಥನಾಲಯಕ್ಕೆ ಹೊಸ ಕಟ್ಟಡ: ಶಾಸಕ ವೇದವ್ಯಾಸ ಕಾಮತ್ ಮುಂದಾಳತ್ವ

Last Updated 28 ಸೆಪ್ಟೆಂಬರ್ 2021, 16:06 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿನ ಕ್ರೈಸ್ತರ ಸ್ಮಶಾನ ಭೂಮಿಯಲ್ಲಿ 1886ರಲ್ಲಿ ನಿರ್ಮಾಣವಾಗಿದ್ದ ಪ್ರಾರ್ಥನಾಲಯವನ್ನು ಸರ್ಕಾರ ಜೀರ್ಣೋದ್ಧಾರ ಮಾಡಿದ್ದು, ಅ.3ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

‘138 ವರ್ಷಗಳ ಹಿಂದೆ ಸ್ಥಾಪನೆಯಾದ ಬೊಕ್ಕಪಟ್ನ ವಿಶ್ರಾಂತಿ ಸಭೆಯ ಸದಸ್ಯರು ಮಣ್ಣಗುಡ್ಡೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ 1886ಕ್ಕೆ ಪ್ರಾರ್ಥನಾಲಯ ನಿರ್ಮಿಸಿದ್ದರು. ಈಚಿನ ವರ್ಷಗಳಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪ್ರಾರ್ಥನಾಲಯವನ್ನು ಶಾಸಕ ವೇದವಾಸ್ ಕಾಮತ್‍ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರ ಪುನರ್ ನಿರ್ಮಿಸಿದೆ’ ಎಂದು ಬೆನೆಟ್ ಜಿ. ಅಮ್ಮನ್ನ ತಿಳಿಸಿದ್ದಾರೆ.

ಕುದ್ರೋಳಿಯಲ್ಲಿ 1882ರಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆ ಪ್ರಾರಂಭಗೊಂಡಿತ್ತು. ಕಾರ್ಖಾನೆಯಲ್ಲಿನ ಕ್ರೈಸ್ತರಿಗಾಗಿ 1883ರಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತರ ಸಭೆ ಮತ್ತು 1884ರಲ್ಲಿ ಪ್ರಾಥಮಿಕ ಶಾಲೆಯನ್ನು ಬಾಸೆಲ್ ಮಿಶನ್ ಕಾರ್ಖಾನೆ ಪರಿಸರದಲ್ಲಿ ನಿರ್ಮಿಸಿತ್ತು. 1886ರಲ್ಲಿ ಅಗಸ್ಟ್ ಮೆನ್ನರ್ ನಾಯಕತ್ವದಲ್ಲಿ ಪ್ರತ್ಯೇಕವಾದ ಈ ಸಭೆಗೆ 1888ರಲ್ಲಿ ಹೊಸ ದೇವಾಲಯ ನಿರ್ಮಿಸಲಾಯಿತು. ಅದು ‘ವಿಶ್ರಾಂತಿ ದೇವಾಲಯ’ ಎಂದು ಹೆಸರು ಪಡೆಯಿತು.ನಂತರ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡಿತ್ತು. ಆದರೆ, ಇತ್ತೀಚೆಗೆ ಆ ಶಾಲೆಯು ಮುಚ್ಚಿತು.

ಉದ್ಘಾಟನಾ ಸಮಾರಂಭದಲ್ಲಿ ಪ್ರೊಟೆಸ್ಟೆಂಟ್‌ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಧರ್ಮಾಧ್ಯಕ್ಷ ಮೋಹನ್ಮನೋರಾಜ್‍ ಆಶೀರ್ವಚನ ನೀಡುವರು. ವಿಶ್ರಾಂತಿ ಸಭೆಯ ಧರ್ಮಗುರುಸಂತೋಷ್ ಕುಮಾರ್ ಆರಾಧನೆ ನಡೆಸಿಕೊಡುವರು. ಮೇಯರ್ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT