ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ ಕೊರತೆ ನೀಗಿಸಿದ ಕುಟೀರ

ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪರಿಸರಸ್ನೇಹಿ ಕೊಠಡಿ ನಿರ್ಮಾಣ
Last Updated 7 ಏಪ್ರಿಲ್ 2021, 14:56 IST
ಅಕ್ಷರ ಗಾತ್ರ

ಪುತ್ತೂರು: ವಿದ್ಯಾರ್ಥಿಗಳಿಗೆ ಕುಳಿತುಕೊಂಡು ಪಾಠ ಕೇಳುವ ಕೊಠಡಿ ಕೊರತೆಯನ್ನು ನೀಗಿಸಲು ಕೆಯ್ಯೂರಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಪರಿಸರಸ್ನೇಹಿ ತಾತ್ಕಾಲಿಕ ಕೊಠಡಿ ರೂಪುಗೊಂಡಿದೆ. ಬೇಸಿಗೆಯ ಬಿಸಿಲ ಧಗೆಯನ್ನು ಈ ಕೊಠಡಿ ಕೊಂಚ ಕಡಿಮೆ ಮಾಡಿದೆ.

ತಾಲ್ಲೂಕಿನ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ವಿಭಾಗ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರ ಪ್ರಯತ್ನದಿಂದ ಈ ಕೊಠಡಿ ಮೇಲೆದ್ದಿದೆ. ಮರದ ಕಂಬ ನಿಲ್ಲಿಸಿ, ಅದಕ್ಕೆ ಸೋಗೆಯ ಹೊದಿಕೆ ಹಾಕಲಾಗಿದೆ. ಸುತ್ತಲೂ ಹಸಿರು ಶೇಡ್‌ನೆಟ್ ಅಳವಡಿಸಲಾಗಿದೆ. ಶಿಕ್ಷಣ ಸಂಸ್ಥೆಯ ಕೊಠಡಿ ಕೊರತೆ ನೀಗಿಸಲು, ಕಂಡುಕೊಂಡ ಪರಿಹಾರ ಕ್ರಮ ಇದಾಗಿದೆ.

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಸಂಸ್ಥೆಯ ಕಾಲೇಜು ವಿಭಾಗಕ್ಕೆ ಕೊಠಡಿಗಳ ಕೊರತೆ ಇದೆ. ಪ್ರೌಢಶಾಲಾ ವಿಭಾಗದ ಮೂರು ಕೊಠಡಿಗಳನ್ನು ಎರವಲು ಪಡೆದು, ಕಾಲೇಜು ವಿಭಾಗದ ತರಗತಿಗಳನ್ನು ನಡೆಸಲಾಗುತ್ತಿದೆ. ಕಲೆ, ವಾಣಿಜ್ಯ, ವಿಜ್ಞಾನ ಈ ಮೂರು ವಿಭಾಗಗಳಿರುವ ಕಾಲೇಜಿನಲ್ಲಿ, ತರಗತಿ ಕೊಠಡಿಗಳು, ಪ್ರಯೋಗಾಲಯ, ಕಂಪ್ಯೂಟರ್, ಗ್ರಂಥಾಲಯ ಸೇರಿದಂತೆ 11 ಕೊಠಡಿಗಳ ಕೊರತೆ ಇದೆ. ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಬಾರದೆಂದು ಶಿಕ್ಷಣ ಸಂಸ್ಥೆಯವರು ಈ ವ್ಯವಸ್ಥೆ ಸೃಷ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT