ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಬ್ರಹ್ಮಣ್ಯ: ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ಸ್ವಚ್ಛತೆ

Published : 13 ಆಗಸ್ಟ್ 2024, 13:47 IST
Last Updated : 13 ಆಗಸ್ಟ್ 2024, 13:47 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿ.ಮೀ. ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಎರಡೂ ಬದಿಯನ್ನು ಸ್ವಚ್ಛಗೊಳಿಸಿದರು.

ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ಸುಮಾರು 2 ಪಿಕ್‌ಅಪ್‌ನಷ್ಟು ಕಸ ಸಿಕ್ಕಿದೆ.

ಕಾಡಿನ ದಾರಿಯಲ್ಲಿ ಸ್ವಚ್ಛತೆ ಹಾಗೂ ಜಾಗೃತಿ ಫಲಕವನ್ನು ಅಳವಡಿಸಿದರು
ಕಾಡಿನ ದಾರಿಯಲ್ಲಿ ಸ್ವಚ್ಛತೆ ಹಾಗೂ ಜಾಗೃತಿ ಫಲಕವನ್ನು ಅಳವಡಿಸಿದರು

ಕಾಡಿನ ದಾರಿಯಲ್ಲಿ ಜಾಗೃತಿ ಫಲಕಗಳನ್ನೂ ಅಳವಡಿಸಿದರು. ಅರಣ್ಯ ಇಲಾಖೆಯೂ ಸಹಯೋಗ ನೀಡಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಸ ಎಸೆಯುವವರ ಪತ್ತೆಗೆ ಮುಂದಾಗಿದೆ. ರಸ್ತೆ ಬದಿ ಕಸ ಎಸೆಯುವವರನ್ನು ಕಂಡರೆ ತಕ್ಷಣವೇ ಫೊಟೊ ಸಹಿತ ಇಲಾಖೆಗೆ ಮಾಹಿತಿ ನೀಡುವ ಬಗ್ಗೆಯೂ ಯುವಕರು ನಿರ್ಧರಿಸಿದ್ದಾರೆ.

ಪ್ರಮುಖರಾದ ಅಶೋಕ್ ನೆಕ್ರಾಜೆ, ಲತಾ ಆಜಡ್ಕ, ಭರತ್ ಕಮಿಲ, ಜಯಪ್ರಕಾಶ್ ಮೊಗ್ರ, ರಾಧಾಕೃಷ್ಣ ತುಪ್ಪದಮನೆ, ಅರಣ್ಯ ಇಲಾಖೆಯ ಸಂತೋಷ್, ಧರ್ಣಪ್ಪ, ಭರಮಪ್ಪ, ಧನಂಜಯ , ಗಣೇಶ್ ಹೆಗ್ಡೆ, ಬಾಂಧವ್ಯ ಗೆಳೆಯರ ಬಳಗದ ತುಂಗನಾಥ ಕಾಯನಕೋಡಿ, ಹರ್ಷಿತ್‌ ಕಾಂತಿಲ, ಚೇತನ್ ಕಾಂತಿಲ, ಪವನ್ ಕಾಂತಿಲ, ನಿತ್ಯಾನಂದ ಅಂಬೆಕಲ್ಲು ಕಮಿಲ, ವಿನಯಚಂದ್ರ ಕಾಂತಿಲ, ಉದಯಕುಮಾರ್ ಕಾಂತಿಲ, ಭರತ್ ಕಾಂತಿಲ, ಕುಸುಮಾಧರ ಕಾಂತಿಲ, ತನ್ವಿತ್, ನಿರಂಜನ ಕಾಂತಿಲ, ಪ್ರಣಾಮ್, ಜಯಪ್ರಕಾಶ್ ಕಾಂತಿಲ, ವೆಂಕಟ್ರಮಣ ಭಾಗವಹಿಸಿದ್ದರು.

ಸಂಗ್ರಹಿಸಿದ ಕಸ
ಸಂಗ್ರಹಿಸಿದ ಕಸ

ಪರಿಸರದ ಸ್ವಚ್ಛತೆಯನ್ನು ಮಾಡಿದ್ದು, ಮುಂದೆ ಈ ಪ್ರದೇಶದಲ್ಲಿ ಸ್ವಚ್ಛತೆಯ ಬಗ್ಗೆ ನಿಗಾ ವಹಿಸುತ್ತಾರೆ ಎಂದು ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT