ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವೂರು: ಸ್ವಚ್ಛತಾ ಆಂದೋಲನ ಉದ್ಘಾಟನೆ

Published : 1 ಸೆಪ್ಟೆಂಬರ್ 2024, 13:42 IST
Last Updated : 1 ಸೆಪ್ಟೆಂಬರ್ 2024, 13:42 IST
ಫಾಲೋ ಮಾಡಿ
Comments

ಮುಡಿಪು: ಪಾವೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಎಸ್‌ಕೆಎಸ್‌ಎಸ್‌ಎಫ್‌ ವಿಖಾಯ, ಎಸ್‌ಎಸ್‌ಎಫ್‌, ಎಸ್‌ವೈಎಸ್, ಸಂಜೀವಿನಿ ಒಕ್ಕೂಟ, ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾದಳ, ಹಸಿರುದಳ, ಎಸ್‌ಡಿಪಿಐ, ಶಿವಾಜಿ ಭಂಡಾರಮನೆ, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಗ್ರಾಮದಾದ್ಯಂತ ಸ್ವಚ್ಛತಾ ಆಂದೋಲನ‌ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ‌ ಪಂಚಾಯಿತಿ ಸದಸ್ಯ ಮಹಮ್ಮದ್ ಅನ್ಸಾರ್ ಇನೋಳಿ ಮಾತನಾಡಿದರು.

ಅಲೋಶಿಯಸ್ ಕಾಲೇಜಿನ ಪ್ರತಿನಿಧಿ ಆಲ್ವಿನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್ ಕೆ., ಕಾರ್ಯದರ್ಶಿ ಇಸ್ಮಾಯಿಲ್, ಉಪಾಧ್ಯಕ್ಷೆ ಮೆಹರುನ್ನಿಸಾ, ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಗಂಗಾ ಸಂಜೀವಿನಿ ಒಕ್ಕೂಟದ ಕಾಂಚನಾ, ಪಾವೂರು ಗ್ರಾ.ಪಂ.ಸದಸ್ಯರಾದ ದಯಾನಂದ, ರಿಯಾಝ್ ಅಹ್ಮದ್ ಗಾಡಿಗದ್ದೆ, ರಿಝ್ವಾನ್ ಮಲಾರ್, ರವಿಕಲಾ, ಚೆನ್ನಮ್ಮ, ಖತೀಜಾ ಬಾನು, ಮಾಜಿ ಅಧ್ಯಕ್ಷೆ ಖಮರುನ್ನಿಸಾ ಭಾಗವಹಿಸಿದ್ದರು.

ಹಸಿರುದಳದ ಸಂಯೋಜಕ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT