ಮಂಗಳೂರು: ಬಜೆಟ್ ಲೆಕ್ಕಾಚಾರದ ಕುರಿತು ವಿಧಾನ ಮಂಡಲ ಸದಸ್ಯರಿಗೆ ಇದೇ 9 ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ಹೋಟೆಲ್ನಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 17 ಸಲ ಬಜೆಟ್ ಮಂಡಿಸಿ ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 'ಅನೇಕ ಶಾಸಕರಿಗೆ ಬಜೆಟ್ಗೆ ಸಂಪನ್ಮೂಲ ಕ್ರೋಢೀಕರಿಸುವುದು ಹೇಗೆ, ಹಣಕಾಸಿನ ವರ್ಗೀಕರಣ ಹೇಗೆ, ವಿತ್ತೀಯ ಹೊಣೆಗಾರಿಕೆ, ವಿತ್ತೀಯ ಕೊರತೆ ಎಂದರೇನು ಎಂಬ ಕುರಿತ ಸಂಪೂರ್ಣ ತಿಳಿವಳಿಕೆ ಇರುವುದಿಲ್ಲ. ನಾನು ಶಾಸಕನಾದಾಗ ಈ ಬಗ್ಗೆ ಗೊತ್ತಿರಲಿಲ್ಲ. ಈ ಕಾರ್ಯಾಗಾರದಿಂದ ಅವರು ಬಜೆಟ್ ಕುರಿತ ಚರ್ಚೆಯಲ್ಲಿ ಸಮರ್ಥವಾಗಿ ಭಾಗವಹಿಸಲು ಸಾಧ್ಯವಾಗಲಿದೆ ಎಂದರು.

'ಇವತ್ತಿನ ಶಾಸಕರು ಭವಿಷ್ಯದಲ್ಲಿ ಹಣಕಾಸು ಸಚಿವರಾಗಬಹುದು. ಮುಖ್ಯಮಂತ್ರಿಯೂ ಆಗಬಹುದು. ಅವರು ಉತ್ತಮ ಸಂಸದೀಯ ಪಟುಗಳಾಗಿ ರೂಪುಗೊಳ್ಳಬೇಕು ಎಂಬ ಕಾರಣಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ನಾನು ಚರ್ಚಿಸಿಯೇ ವಿಧಾನ ಮಂಡಲ ಸದಸ್ಯರಿಗಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ಸೋಮವಾರ ಬಜೆಟ್ ಕಲಾಪದ ಬಳಿಕ ಸಂಜೆ 4 ರಿಂದ ವೇಳೆ ಕಾರ್ಯಾಗಾರ ನಡೆಯಲಿದೆ. ಬಜೆಟ್ ರೂಪಿಸುವ ಕುರಿತು ಉತ್ತಮ ಅನುಭವ ಹೊಂದಿರುವ ಕೆಲವು ಅಧಿಕಾರಿಗಳು, ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಣಕಾಸು ತಜ್ಞರು ಕೂಡ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಎಲ್ಲ ಶಾಸಕರಿಗೆ ತಿಳಿಸಿದ್ದೇವೆ ಎಂದರು.

ರಾಜ್ಯದ 2026-27ನೇ ಸಾಲಿನ ಬಜೆಟ್ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಖಾದರ್ ನಿರಾಕರಿಸಿದರು. ಸಾಲದ ಪ್ರಮಾಣ ಹೆಚ್ಚಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, 'ಟೀಕೆಗಳು ಎಲ್ಲದಕ್ಕೂ ಬರುತ್ತವೆ. ಕೇಂದ್ರ ಬಜಟ್ ಕುರಿತೂ ಟೀಕೆಗಳು ಬಂದಿವೆ. ವಿಧಾನ ಸಭಾಧ್ಯಕ್ಷನಾಗಿ ಈ ಬಗ್ಗೆ ನಾನು ಹೇಳಿಕೆ ನೀಡುವುದು ಸರಿಯಾಗದು. ರಾಜ್ಯ ಸರ್ಕಾರದ ಬಜೆಟ್ ಕುರಿತು ವಿಧಾನಸಭೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.