ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಪಾಡಿಯಲ್ಲಿ ಸಿಲುಕಿದ್ದ ಗರ್ಭಿಣಿ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ

Last Updated 30 ಏಪ್ರಿಲ್ 2020, 7:07 IST
ಅಕ್ಷರ ಗಾತ್ರ

ಉಳ್ಳಾಲ (ಮಂಗಳೂರು): ಉಪ್ಪಳ ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ಷೇತ್ರದ ಕುಟುಂಬವೊಂದು ಲಾಕ್‍ಡೌನ್‌ನಿಂದಾಗಿ ತಲಪಾಡಿಯಲ್ಲಿ ಸಿಲುಕಿದ್ದು, ಈ ಪೈಕಿ ಗರ್ಭಿಣಿ ಮಹಿಳೆ ಊಟಕ್ಕಿಲ್ಲದೆ ಅಲವತ್ತುಕೊಂಡ ಹಿನ್ನೆಲೆಯಲ್ಲಿ ತಕ್ಷಣಸ್ಪಂದಿಸಿದ ಯಡಿಯೂರಪ್ಪ ಅವರನ್ನು ಗುರುವಾರ ಬೆಳಿಗ್ಗೆ ಮನೆ ಸೇರಿಸಿದ್ದಾರೆ.

ಶಿಕಾರಿಪುರ ತಾಲ್ಲೂಕಿನಕಲಾವತಿ ಮೂರು ತಿಂಗಳ ಗರ್ಭಿಣಿ. ಉಪ್ಪಳದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ಕುಟುಂಬ ಎರಡು ತಿಂಗಳಿನಿಂದ ಅಲ್ಲೇ ನೆಲೆಸಿತ್ತು. ಕೋವಿಡ್-19ರ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ, ಶಿಕಾರಿಪುರದ ಮನೆ ಸೇರುವ ಪ್ರಯತ್ನವನ್ನುಕುಟುಂಬ ನಡೆಸಿತ್ತು.

ಅದಕ್ಕಾಗಿ ರೈಲ್ವೆಹಳಿಯಲ್ಲಿ ಸುಡುಬಿಸಿಲಿನಲ್ಲಿ ಗರ್ಭಿಣಿ ಸಹಿತ ಕುಟುಂಬ ಸುಮಾರು 20 ಕಿ.ಮೀ ನಡೆದುಕೊಂಡು ಸಾಗಿತ್ತು. ಆದರೆ ತಲಪಾಡಿ ಪ್ರವೇಶಿಸುತ್ತಿದ್ದಂತೆ ತಡೆಹಿಡಿದ ರೈಲ್ವೆಪೊಲೀಸರುಮುಂದೆ ಹೋಗಲು ಬಿಡಲಿಲ್ಲ. ವಾಪಸ್ಸು ಕೇರಳಕ್ಕೆ ಹೋಗುವಂತೆ ಪೊಲೀಸರು ಸೂಚಿಸಿದರೂ, ಕುಟುಂಬಕ್ಕೆ ಅಲ್ಲಿ ನೆಲೆಯಿಲ್ಲದ ಕಾರಣರಸ್ತೆ ಬದಿಯಲ್ಲೇ ಉಳಿಯಲು ನಿರ್ಧರಿಸಿತ್ತು.

ಆದರೆ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಸೇರಿ ಗರ್ಭಿಣಿಯಿದ್ದ ಕುಟುಂಬವನ್ನು ಕೇರಳದ ಕುಂಜತ್ತೂರು ಗ್ರಾಮಕ್ಕೆ ಸೇರಿದ ಮರಿಯಾಶ್ರಮ ಶಾಲೆಯಲ್ಲಿ ಇರಿಸಿತ್ತು. ಅಲ್ಲಿಗೆ ಸ್ಥಳೀಯರು ಮೂರು ಹೊತ್ತಿನ ಊಟ ಪೂರೈಸುತ್ತಿದ್ದರು. ಆದರೆ ಶಿವಮೊಗ್ಗ ಮೂಲದವರಾಗಿರುವುದರಿಂದ ಗರ್ಭಿಣಿಗೆ ಇಲ್ಲಿನ ಆಹಾರ ತಿನ್ನಲಾಗುತ್ತಿರಲಿಲ್ಲ. ದಿನದಲ್ಲಿ ಒಂದು ಬಾರಿ ಊಟ ಮಾಡಿ, ತಮ್ಮನ್ನು ಊರಿಗೆ ಸೇರಿಸುವಂತೆ ಅವರು20 ದಿನಗಳಿಂದ ಅಲವತ್ತುಕೊಳ್ಳುತ್ತಿದ್ದರು.

ಕ್ವಾರಂಟೈನ್ ಅವಧಿ ಮುಗಿದರೂಊರಿಗೆ ತೆರಳಲುದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಬುಧವಾರಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು.ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದಂತೆ ಮುಖ್ಯಮಂತ್ರಿ ಆಪ್ತಕಾರ್ಯದರ್ಶಿ ಬಸವರಾಜ್ ಅವರು ಕರೆ ಮಾಡಿ ಕುಟುಂಬವನ್ನು ಊರಿಗೆ ತಲುಪಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದ್ದರು.

ಒಂದು ಗಂಟೆಯೊಳಗೆ ಕಾರ್ಮಿಕರಿಗೆ ಕೆಎಸ್‌ಆರ್‌ಟಿಸಿ ಬಸ್ ಕಳುಹಿಸಿದರು. ಅಲ್ಲಿನ ಸಂಸದ, ಮುಖ್ಯಮಂತ್ರಿ ಅವರ ಪುತ್ರ ರಾಘವೇಂದ್ರ ಅವರು ಕುಟುಂಬದ ಜತೆಗೆ ಮಾತನಾಡಿ, ಬಸ್ ಕಳುಹಿಸಿರುವ ಕುರಿತುಮಾಹಿತಿ ನೀಡಿದ್ದರು. ಗುರುವಾರ ಬೆಳಿಗ್ಗೆ ಗರ್ಭಿಣಿ ಸಹಿತ ಕುಟುಂಬವನ್ನು ಅವರ ಮನೆಗೂ ತಲುಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT