‘ಕಡಬ ತಾಲ್ಲೂಕು ಅಭಿವೃದ್ಧಿಗೆ ಮುಖ್ಯಮಂತ್ರಿಯಿಂದ ಅನುದಾನ'

7

‘ಕಡಬ ತಾಲ್ಲೂಕು ಅಭಿವೃದ್ಧಿಗೆ ಮುಖ್ಯಮಂತ್ರಿಯಿಂದ ಅನುದಾನ'

Published:
Updated:
Deccan Herald

ಕಡಬ (ಉಪ್ಪಿನಂಗಡಿ): ‘ಕಡಬ ತಾಲ್ಲೂಕು ಅಭಿವೃದ್ಧಿ ಪೂರಕವಾಗಿ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರಪೂರ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಕಡಬ ತಾಲ್ಲೂಕು ಹೋರಾಟ ಸಮಿತಿ ಕಾರ್ಯದರ್ಶಿ(ತಾಲ್ಲೂಕು ಜೆಡಿಎಸ್ ಅಧ್ಯಕ್ಷ) ಸೆಯ್ಯದ್ ಮೀರಾ ಸಾಹೇಬ್ ತಿಳಿಸಿದರು.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ’ ಎಂದರು. ಕಡಬದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುದಾನ ಇರಿಸಲಾಗಿದೆ, ಎಡಮಂಗಲ-ಕಡಬ ಸಂರ್ಕಕ್ಕೆ ಕುಮಾರಧಾರ  ನದಿಯಲ್ಲಿ ಪಾಲೋಳಿಯಲ್ಲಿ ಸೇತುವೆ ನಿರ್ಮಾಣ, ಕಡಬದಲ್ಲಿ ಸರ್ಕಾರಿ ಪದವಿ ಕಾಲೇಜು, ಹರಿಹರ ಪಲ್ಲತ್ತಡ್ಕ ಗ್ರಾಮದ ಕೂಜುಗೋಡು ಕಟ್ಟೆಮನೆಗೆ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗುವ ಹಂತದಲ್ಲಿದೆ’ ಎಂದು ವಿವರಿಸಿದರು.

ಹೋರಾಟದ ಫಲ: 5 ದಶಕಗಳ ಹೋರಾಟದ ಫಲವಾಗಿ ಕಡಬ ತಾಲ್ಲೂಕು ಘೋಷಣೆ ಆಗಿದೆ. ಉಪ ತಹಶೀಲ್ದಾರ್ ಕಚೇರಿ ಹಾಗೂ ವಿಶೇಷ ತಹಶೀಲ್ದಾರ್ ಕಚೇರಿ ಆರಂಭಗೊಂಡಿದೆ. ಆದರೆ ಪಂಜದಂತಹ ಬಹಳ ಹತ್ತಿರದ ಪ್ರದೇಶಗಳು ಹೊರಗೆ ಇರುವುದು ವಿಷಾದದ ಸಂಗತಿ, ತಾಲ್ಲೂಕಿಗೆ ಸೇರಿಸಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದರು. ಜೆಡಿಎಸ್ ಮುಖಂಡರಾದ ಸ್ಕರಿಯ ಕಳಾರ, ಕೆ.ಟಿ. ಥಾಮ್ಸನ್, ಚಂದ್ರಶೇಖರ ಗೌಡ ಕೋಡಿಬೈಲು, ಫಾರೂಕ್, ಹರಿಪ್ರಸಾದ್ ಗೌಡ ಎನ್ಕಜೆ, ಮೋಹನ ಗೌಡ ಪಂಜೋಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !