ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕಾಶಿಯಾಗಲಿರುವ ದೇರಳಕಟ್ಟೆ: ಯು.ಟಿ ಖಾದರ್

ಸರ್ಕಾರಿ ಪಿಯು ಕಾಲೇಜು ಉದ್ಘಾಟಿಸಿದ ಯು.ಟಿ ಖಾದರ್ ಭರವಸೆಯ ನುಡಿ
Last Updated 19 ಆಗಸ್ಟ್ 2022, 11:33 IST
ಅಕ್ಷರ ಗಾತ್ರ

ಉಳ್ಳಾಲ: ದೇರಳಕಟ್ಟೆ ಪ್ರದೇಶ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದು ಭವಿಷ್ಯದಲ್ಲಿ ಶಿಕ್ಷಣಕಾಶಿಯಾಗಿ ಹೊರಹೊಮ್ಮಲಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್‌ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಾಣಗೊಂಡಿರುವ ದೇರಳಕಟ್ಟೆ ಪದವಿಪೂರ್ವ ಕಾಲೇಜಿನ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಟೆಕಾರು, ಹರೇಕಳ, ಸುಜೀರ್, ಪಾವೂರು, ಕೊಣಾಜೆ ಪ್ರದೇಶಗಳ ಜನರಿಂದಸರಕಾರಿ ಪಿಯು ಕಾಲೇಜಿಗೆ ಬೇಡಿಕೆ ಇತ್ತು. ಎಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಇಲ್ಲಿ ಕಾಲೇಜು ನಿರ್ಮಿಸಲಾಗಿದೆ. ಮಂಗಳೂರು ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಹೈಸ್ಕೂಲ್ ಇರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ಕಡೆಗಳ ಶಾಸಕರು ಐದು ಕಾಲೇಜುಗಳಿಗೆ ಬೇಡಿಕೆ ಇರಿಸಿದ್ದಾರೆ. ಆದರೆ ಸಚಿವರು ಈ ಕ್ಷೇತ್ರಕ್ಕೆ ಮಾತ್ರ ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಬೇಕು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅವರ ಕ್ಷೇತ್ರಕ್ಕೆ ಯೋಜನೆಗಳನ್ನು ಒದಗಿಸಿರುವುದರ ಋಣ ತೀರಿಸಲು ಕಾಲೇಜು ಮಂಜೂರು ಮಾಡಿದ್ದಾರೆ. ಐಟಿಐ ಸ್ಥಾಪಿಸಲು ಇಲಾಖೆ ಭರವಸೆ ನೀಡಿದೆ. ಸ್ಥಳಾವಕಾಶವಿಲ್ಲದ ಕಾರಣ ಮಾಡಲಾಗಲಿಲ್ಲ‘ ಎಂದು ಅವರು ಹೇಳಿದರು.

ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಲತ್ ಭಾನು, ಪಿಯು ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಬಾಬು ಗಾಂವ್ಕರ್, ವಾಡ್೯ ಸದಸ್ಯ ಇಕ್ಬಾಲ್, ಸುರಕ್ಷಾ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಶಿಶು ಕಲ್ಯಾಣ ಇಲಾಖೆ ಸಹನಿರ್ದೇಶಕ ಹರೀಶ್, ಅಂಗನವಾಡಿ ಮೇಲ್ವಿಚಾರಕಿ ಕಲ್ಪನಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಚ್ ಇಸ್ಮಾಯಿಲ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರೈ, ಕಾರ್ಯದರ್ಶಿ ಸುರೇಶ್ ಆಚಾರ್, ಸಿದ್ದೀಕ್, ಮುಖಂಡರಾದ ಯೂಸುಫ್ ಬಾವಾ, ವಿಜಯ ಕುಮಾರಿ,
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಯನಾ ಕುಮಾರಿ, ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್‌ ಸತ್ತಾರ್‌, ಅಂಬಿಕಾ, ವಿಮಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT