ಅವಕಾಶ ಸದ್ಭಳಕೆ ಮಾಡಿ: ನೊರೋನ್ಹ

7
ನಾರಾವಿ ಸೇಂಟ್‌ ಅಂತೋನಿ ಕಾಲೇಜಿನಲ್ಲಿ ‘ಕಲಾ ಸೊಬಗು

ಅವಕಾಶ ಸದ್ಭಳಕೆ ಮಾಡಿ: ನೊರೋನ್ಹ

Published:
Updated:
Deccan Herald

ಬೆಳ್ತಂಗಡಿ: ‘ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಜನೆಯ ಸಂದರ್ಭದಲ್ಲಿ ಬದುಕನ್ನು ಕಟ್ಟುವ ಕಡೆಗೆ ಸಾಗಬೇಕು’ ಎಂದು ನ್ಯಾಷನಲ್ ಕ್ಯಾಥೋಲಿಕ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಸುಶೀಲ್ ನೊರೋನ್ಹ ಹೇಳಿದರು.

ನಾರಾವಿ ಸೇಂಟ್‌ ಅಂತೋನಿ ಕಾಲೇಜಿನಲ್ಲಿ ನಡೆದ ಅಂತರ್‍ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಕಲಾ ಸೊಬಗು – 2018’ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಅವಕಾಶಗಳನ್ನು ಸದ್ಬಳಕೆ ಮಾಡುವ ಗುಣವುಳ್ಳ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಸ್ಪರ್ಧಾತ್ಮಕವಾದ ಈ ಯುಗದಲ್ಲಿ ಸವಾಲುಗಳನ್ನು ಮೆಟ್ಟಿ ಪರಿಪೂರ್ಣ ಬದುಕನ್ನು ಹೊಂದುವ ಕಡೆಗೆ ಸದಾ ಚಿಂತನಾಶೀಲರಾಗಿರಬೇಕು ಎಂದರು.

 ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಮನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ತುಳು ನಟ ಸತೀಶ್ ಬಂದಾಲೆ ಪಚಿನಡ್ಕ ಹಾಗೂ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸದಸ್ಯ ಜೋಯಲ್ ಡಿ ಮೆಂಡೋನ್ಸಾ, ಪ್ಯಾರೀಸ್ ಪ್ಯಾಸ್ಟೊರಲ್ ಪರಿಷತ್ತಿನ ಕಾರ್ಯದರ್ಶಿ ರೀಟಾ ಪಿಂಟೊ, ಕಾಲೇಜು ಆಡಳಿತ ಮಂಡಳಿ ಸದಸ್ಯ ಸಂಜಯ್ ಮಿರಾಂದ, ತುಳು ರಂಗಭೂಮಿ ಕಲಾವಿದ ರಿಚರ್ಡ್ ಪಿಂಟೋ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸಲ್ಡಾನ್ಹ ಮುಖ್ಯ ಅತಿಥಿಗಳಾಗಿ

ಕಾಲೇಜಿನ ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೊ ಪ್ರಸ್ತಾವಿಕವಾಗಿ ಮಾತನಾಡಿದರು. ಜೀವಶಾಸ್ತ್ರ ಉಪನ್ಯಾಸಕಿ ದೀಕ್ಷಾ ಗಣೇಶ್ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಧನ್ಯವಾದ ಸಲ್ಲಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

ಸಮಗ್ರ ಪ್ರಶಸ್ತಿ: ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸೇಕ್ರೆಡ್ ಹಾರ್ಟ್ ಹೈಸ್ಕೂಲ್ ಬಜಗೋಳಿ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಪಡೆದುವು. ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವಾಣಿ ಪಿ.ಯು. ಕಾಲೇಜ್, ಹಾಗೂ ದ್ವಿತೀಯ ಸ್ಥಾನವನ್ನು ಮೂಡುಬಿದಿರೆ ಜೈನ್ ಪಿ.ಯು. ಕಾಲೇಜ್, ಪಡೆದುಕೊಂಡವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !