ಮಂಗಳೂರು: ಮುಖ್ಯಮಂತ್ರಿ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದೆ ಎಂದು ಕಾಂಗ್ರೆಸ್ ವರ್ಣಿಸಿದರೆ, ಸಾಲದ ಹೊರೆ ಹೆಚ್ಚಿಸಿದ ಬಜೆಟ್ ಇದಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಬಜೆಟ್ ಜನಪರ ಮತ್ತು ಅಭಿವೃದ್ಧಿ ಪರವಾಗಿದೆ. ರೈತರು, ಮಹಿಳೆಯರು, ಯುವಜನರು, ಮಧ್ಯಮ ವರ್ಗದ ಜನರಿಗೆ ನೀಡಿದ ಯೋಜನೆಗಳು ಸ್ವಾಗತಾರ್ಹ. ಕರಾವಳಿ ಪ್ರದೇಶದ ಪ್ರವಾಸೋದ್ಯಮ, ಮೀನುಗಾರಿಕೆ, ಪೊಲೀಸ್ ಠಾಣೆಗಳ ಬಲವರ್ಧನೆ, ಕೃಷಿ, ಅರಣ್ಯ, ಆರೋಗ್ಯ, ಮುಜರಾಯಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ, ವಸತಿ ಸೇರಿದಂತೆ ಎಲ್ಲ ಸಮುದಾಯದ ಕಲ್ಯಾಣಕ್ಕಾಗಿ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹೇಳಿದ್ದಾರೆ.

‘ಕರಾವಳಿ ಆರ್ಥಿಕತೆ ಮತ್ತು ಶಿಕ್ಷಣಕ್ಕೆ ಹೊಸ ಚೈತನ ನೀಡುವ ಬಜೆಟ್ ಇದಾಗಿದೆ. ಇದು ದೂರದೃಷ್ಟಿಯ ‘ಅಭಿವೃದ್ಧಿ ಪತ್ರ’ವಾಗಿದೆ. ‘ಸೀ ಪ್ಲೇನ್’ ಮತ್ತು ‘ಹೆಲಿ ಟ್ಯಾಕ್ಸಿ’ಗಳಂತಹ ಆಧುನಿಕ ಸೌಲಭ್ಯ ಘೋಷಿಸಿರುವುದು ಜಾಗತಿಕ ಮಟ್ಟದಲ್ಲಿ ಮಂಗಳೂರನ್ನು ಪ್ರವಾಸಿ ತಾಣವಾಗಿ ಗುರುತಿಸಲು ಸಹಕಾರಿಯಾಗಲಿದೆ. ಆಯಕಟ್ಟಿನ ಪ್ರದೇಶಗಳಾದ ಮಾಣಿ ಮತ್ತು ಸಜಿಪನಡುವಿನಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆಯ ನಿರ್ಧಾರವು ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಶ್ಲಾಘಿಸಿದ್ದಾರೆ.

‘ರಾಜ್ಯದ ಸಮಗ್ರ ಅಭಿವೃದ್ಧಿ, ಜನರ ಕಲ್ಯಾಣ ಗಮನದಲ್ಲಿಟ್ಟು ರೂಪಿಸಿರುವ ಕಾರ್ಯಕ್ರಮ ಶ್ಲಾಘನೀಯ. ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಆದ್ಯತೆಯು ಸುಸ್ಥಿರ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.

ಸಾಲದ ಹೊರೆ ಹೆಚ್ಚಿಸಿದ ಬಜೆಟ್: ಬಿಜೆಪಿ

‘ಅಪಾರ ಆರ್ಥಿಕ ಅನುಭವ ಹೊಂದಿರುವ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಪ್ರಗತಿ ಶೂನ್ಯ ಆಗಬಹುದೆಂದು ನಿರೀಕ್ಷಿಸಿರಲಿಲ್ಲ. ಇದು ಕೇವಲ ಅಂಕಿ-ಅಂಶಗಳ ಕಸರತ್ತಾಗಿದ್ದು, ರಾಜ್ಯದ ಜನರನ್ನು ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕಿಸುವುದರಲ್ಲಿ ಅನುಮಾನವಿಲ್ಲ’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದ್ದಾರೆ.

‘ಕಳೆದ ಬಾರಿ ಬಜೆಟ್ ಮಂಡಿಸುವಾಗ ‘ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ’ ಎಂದು ಹೇಳಿದ್ದ ಮುಖ್ಯಮಂತ್ರಿ ಆಗಿನ ಎಷ್ಟು ಘೋಷಣೆಗಳನ್ನು ಕರಾವಳಿ ಭಾಗದಲ್ಲಿ ಸಾಕಾರಗೊಳಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದಾಗ ಮಾತ್ರ ಈಗಿನ ಬಜೆಟ್ಗೆ ತೂಕ ಬರುತ್ತದೆ’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

‘ಅಡಿಕೆ ಬೆಳೆಗಾರರಿಗೆ ಸಹಾಯಧನ ಮರೀಚಿಕೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆಯೇ ಸರ್ಕಾರದ ಸಾಧನೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪಾಲಿಕೆ ನಿರಾಶಾದಾಯಕ ಬಜೆಟ್ ಇದಾಗಿದ್ದು, ಕರಾವಳಿಯ ಜನರಿಗೆ ದ್ರೋಹವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.

‘ಹಿಂದಿನ ಬಜೆಟ್ನಂತೆ ಈ ಬಜೆಟ್ ಘೋಷಣೆಗೆ ಸೀಮಿತವಾದ ಹಾಗಿದೆ. ಬಜೆಟ್ ಗಾತ್ರ ಹಿಗ್ಗಿದೆ. ಜತೆಗೆ ಸಾಲದ ಹೊರೆಯೂ ಇಮ್ಮಡಿಯಾಗಿದೆ. ಬಜೆಟ್ನ ಶೇ.25ರಷ್ಟು ಘೋಷಣೆಗಳನ್ನು ಕೂಡ ಕಾರ್ಯಗತ ಮಾಡುವುದು ಸಾಧ್ಯವಿಲ್ಲ’ ಎಂದು ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲೋ ಸಾಲ ಮಾಡಿಯಾದರೂ ಅಧಿಕಾರಕ್ಕೆ ಅಂಟಿಕೊಳ್ಳುವ ಕಸರತ್ತು ಮಾಡಿದಂತೆ ತೋರುತ್ತಿದೆ. ಕರಾವಳಿ ಕರ್ನಾಟಕವನ್ನು ಪೂರ್ತಿ ಕಡೆಗಣಿಸಿದ್ದು ಎರಡು ಪೊಲೀಸ್ ಠಾಣೆ ನೀಡಿದ್ದೆ ಈ ಬಜೆಟ್ನ ಹೆಗ್ಗಳಿಕೆ’ ಎಂದು ಬಿಜೆಪಿ ಮುಖಂಡ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.