ಶನಿವಾರ, ಡಿಸೆಂಬರ್ 3, 2022
26 °C
ಧರ್ಮಸ್ಥಳ: ವಿದ್ಯುತ್‌ ತಂತಿ ತುಳಿದು ಉದಯ ಗೌಡ ಸಾವು

ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ‘ಶಾಸಕರ ಒತ್ತಡಕ್ಕೆ ಒಳಗಾಗಿ ಧರ್ಮಸ್ಥಳ ಪೊಲೀಸರು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕುತ್ತಿದ್ದಾರೆ. ಕಲ್ಮಂಜ ಕೊಲೆ ಪ್ರಕರಣರಣದ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಎಚ್ಚರಿಕೆ ನೀಡಿದರು.

ವಿದ್ಯುತ್‌ ತಂತಿ ತುಳಿದು ನವೆಂಬರ್ 29ರಂದು ಮೃತಪಟ್ಟ ಉದಯ ಗೌಡ ಎಂಬುವರ ಸಾವಿನ ಘಟನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಕಲ್ಮಂಜ ಗ್ರಾಮದ ಕರಿಯನೆಲದಲ್ಲಿ ಹರೀಶ್ ಗೌಡ ಎಂಬುವರು ಕಾಡು ಪ್ರಾಣಿ ಹಿಡಿಯಲೆಂದು ಅಕ್ರಮವಾಗಿ ತಂತಿ ಹಾಕಿ ಅದರ ಮೂಲಕ ವಿದ್ಯುತ್ ಹರಿಸಿದ್ದೇ ಸಾವಿಗೆ ಕಾರಣ’ ಎಂದು ಪ್ರತಿಭಟನಕಾರರು ದೂರು ನೀಡಿದ್ದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು  ಬುಧವಾರ ಪ್ರತಿಭಟನೆ ನಡೆಸಿದ್ದರು.

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದ ದಿನೇಶ್ ಕೊಲೆ ಪ್ರಕರಣ, ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸೇರಿದಂತೆ ಹಲವು
ಪ್ರಕರಣಗಳನ್ನು ಶಾಸಕರ ಒತ್ತಡದಿಂದ ಪೊಲೀಸರು ಮುಚ್ಚಿ ಹಾಕಿದ್ದಾರೆ. ಉದಯ ಗೌಡ ಅವರನ್ನು ಕೊಲೆ ಮಾಡಲಾಗಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರೂ ಅವರನ್ನು ಬಂಧಿಸಿಲ್ಲ. ಕೊಲೆಯಾದವರ ಕುಟುಂಬದವರಿಗೆ ಬೆದರಿಕೆ ಹಾಕು ತ್ತಿದ್ದಾರೆ ಎಂದು ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೆ. ಗಂಗಾಧರ ಗೌಡ ಮಾತನಾಡಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್, ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಕೆಪಿಸಿಸಿ ಕಾರ್ಯದರ್ಶಿ ಶಾಹಿದ್ ತೆಕ್ಕಲ್, ಮುಖಂಡರಾದ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್, ಕೇಶವ ಗೌಡ, ಅಭಿನಂದನ್, ಗ್ರೇಸಿಯಸ್ ವೇಗಸ್, ದಯಾನಂದ ಬೆಲಾಲು, ಅಭಿದೇವ್ ಆರಿಗ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು