ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ನಡೆಗೆ ವಿವೇಕ ರೈ ಖಂಡನೆ

Last Updated 1 ಏಪ್ರಿಲ್ 2020, 6:04 IST
ಅಕ್ಷರ ಗಾತ್ರ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ 6 ರಿಂದ ಅಪರಾಹ್ನ 3 ರವರೆಗೆ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿದಾಗ ಜನರು ' ಸಾಮಾಜಿಕ ಅಂತರ' ( Social Distancing) ತತ್ವವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಜನಪ್ರತಿನಿಧಿಗಳು ಆಕ್ಷೇಪಿಸಿದ್ದಾರೆ.

ಹಿಂದಿನ‌ ಮೂರುದಿನಗಳ ಕಾಲ ಧಾರಾವಾಹಿ ಯಾಗಿ ರಾತ್ರಿ ವೇಳೆ ಪ್ರಸಾರವಾದ ಇಡೀದಿನದ ನಿರ್ಬಂಧಗಳಿಂದ ಹಸಿದ ಮತ್ತು ಮುಂದಿನ ದಿನಗಳ ಅನಿಶ್ಚಿತತೆಯ ಆತಂಕದಿಂದ ಜನರು ಕಠಿಣ ಭೌತಿಕ ಅಂತರದ ಲಕ್ಷ್ಮಣರೇಖೆಯನ್ನು‌ ಮೀರಿರಬಹುದು.ಆದರೆ ತಮ್ಮ ಜೊತೆಗೆ ಕ್ಯೂವಿನಲ್ಲಿ ಇದ್ದ ಅಪರಿಚಿತರ ಬಗ್ಗೆ ಯಾವುದೇ ಬಗೆಯ ಅಂತರವನ್ನು ಇಟ್ಟುಕೊಳ್ಳದೆ ಮಾನವೀಯವಾಗಿ ಸಹಾಯ ಮಾಡಿದ್ದನ್ನು ನಾನು ನಿನ್ನೆ ಮಂಗಳೂರಿನಲ್ಲಿ ‌ಕಣ್ಣಾರೆ ಕಂಡಿದ್ದೇನೆ.

ಆದರೆ ನಮ್ಮ ಜನಪ್ರತಿನಿಧಿಗಳು ಲಾಕ್ ಡೌನ್ ಆದ ಬಳಿಕ ಜನರ ಜೊತೆಗೆ ಎಲ್ಲ ಅರ್ಥಗಳಲ್ಲೂ ' ಸಾಮಾಜಿಕ ಅಂತರ' ವನ್ನು ಪೂರ್ಣವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಲಾಕ್ ಡೌನ್ ಬಳಿಕದ ಬೆಳವಣಿಗೆಯನ್ನು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT