ಕೋರ್ಟ್‌ ಆದೇಶ: ಪರವಾನಗಿ ಅಸ್ತು

6
ಗ್ಯಾಸ್ ಏಜೆನ್ಸಿ/ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವಿವಾದ

ಕೋರ್ಟ್‌ ಆದೇಶ: ಪರವಾನಗಿ ಅಸ್ತು

Published:
Updated:
ಚಂದಪ್ಪ ಮೂಲ್ಯ

ಉಪ್ಪಿನಂಗಡಿ:  ಅಡುಗೆ ಅನಿಲ ದಾಸ್ತಾನು ಘಟಕಕ್ಕೆ ಸಂಬಂಧಿಸಿಂತೆ ಪರವಾನಗಿ ನೀಡಲು ಯಾವುದೇ ರ್ದಿಷ್ಟ ಕಾತಣಗಳಿಲ್ಲದಿದ್ದರೂ, ಸತಾಯಿಸುತ್ತಿದ್ದ   ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವಿರುದ್ಧ ನಿವೃತ್ತ ಸೇನಾಧಿಕಾರಿ ನಡೆಸಿದ ಒಂದೂವರೆ ವರ್ಷದ ಕಾನೂನು ಹೋರಾಟ  ಸಫಲವಾಗಿದ್ದು, ಪಂಚಾಯಿತಿ ಪರವಾನಗಿ ನೀಡಿದೆ’.

 ನಿವೃತ್ತ ಸೇನಾಧಿಕಾರಿ, ಅಮೂಲ್ಯ ಗ್ಯಾಸ್ ಏಜೆನ್ಸಿ ಮಾಲಕ ಚಂದಪ್ಪ ಮೂಲ್ಯ  ಗುರುವಾರ ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿದರು. ‘ಗ್ರಾಮ ಪಂಚಾಯಿತಿಯಿಂದ ಅಡುಗೆ ಅನಿಲ ದಾಸ್ತಾನು ಘಟಕಕ್ಕೆ ಪರವಾನಗಿಗೆ ಪಡೆಯಲು ಒಂದೂವರೆ ವರ್ಷ ಕಾನೂನು ಹೋರಾಟ ಮಾಡಬೇಕಾಗಿ ಬಂತು. ಲೋಕಾಯುಕ್ತ ನ್ಯಾಯಾಲಯದ ನ್ಯಾಯಮೂರ್ತಿ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಅವರ ಆದೇಶದ ಅನುಸಾರ ಹಿರೆಬಂಡಾಡಿ ಗ್ರಾಮ ಪಂಚಾಯಿತಿ ಆಡಳಿತವು ಪರವಾನಗಿ ನೀಡಿದ್ದು, ತನ್ಮೂಲಕ ನ್ಯಾಯ ಲಭಿಸಿದೆ’ ಎಂದು ಅವರು ತಿಳಿಸಿದರು.‌

 ಸತಾಯಿಸುವಿಕೆ:  ಸಿಲಿಂಡರ್ ದಾಸ್ತಾನು ಘಟಕವನ್ನು  ಹಿರೆಬಂಡಾಡಿ ಅಡೇಕಲ್ ಎಂಬಲ್ಲಿ ಸ್ಥಾಪಿಸಲು ಮುಂದಾಗಿದ್ದೆ. ಕಟ್ಟಡ ಕಟ್ಟಲು ಪರವಾನಗಿ ನೀಡಿದ ಪಂಚಾಯಿತಿ ಆಡಳಿತ  ಘಟಕಕ್ಕೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದಾಸ್ತಾನು ಘಟಕಕ್ಕೆ ಪರವಾನಗಿ ನೀಡದೆ ಸತಾಯಿಸಿತ್ತು’ ಎಂದರು.

ಮನ್ನಣೆ ಇಲ್ಲ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪರವಾನಗಿ ನೀಡಲು ಸೂಚಿಸಿದರಾದರೂ ಗ್ರಾಮ ಪಂಚಾಯಿತಿ ಆಡಳಿತ ಮನ್ನಣೆ ನೀಡಿರಲಿಲ್ಲ ಎಂದರು.‌ ‘ನಾನು ಈ ಬಗ್ಗೆ ರಾಜ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ,  ವಿನಾ ಕಾರಣ ಸತಾಯಿಸುತ್ತಿರುವ ಬಗ್ಗೆ ಪಂಚಾಯಿತಿ ಆಡಳಿತದ ಕ್ರಮವನ್ನು  ಆಕ್ಷೇಪಿಸಿದರು’ ಎಂದರು.

"ಜೂನ್ 30ರ ಒಳಗಾಗಿ ಚಂದಪ್ಪ ಮೂಲ್ಯರ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಘಟಕಕ್ಕೆ ಪರವಾನಗಿ ನೀಡಬೇಕು, ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಜೂನ್ 16ರಂದು ಆದೇಶ ನೀಡಿದ್ದರು."
ಅದರಂತೆ ಜೂನ್ 30ರಂದು ಪರವಾನಗಿ ಪತ್ರವನ್ನು ನೀಡಲಾಗಿದೆ. ಲೋಕಾಯುಕ್ತ ನ್ಯಾಯಾಲಯಕ್ಕೆ ನಾನು ಆಭಾರಿ ಆಗಿದ್ದೇನೆ’ ಎಂದರು.

‘ನನ್ನ ಎಲ್ಲಾ ದಾಖಲೆಗಳೊಂದಿಗೆ ನಿಯಮಬದ್ದವಾಗಿ ಕಾನೂನು ಪಾಲನೆಯೊಂದಿಗೆ ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ ಸರ್ಕಾರ ಸೂಚಿತ ಜನವಸತಿ ಪ್ರದೇಶದ ಅಂತರಕ್ಕಿಂತ ಹೆಚ್ಚಿನ ಅಂತರ ಕಾಯ್ದುಕೊಂಡು ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಸ್ಥಳೀಯರನ್ನು ಪ್ರಚೋಧಿಸಿ ಮನಬಂದಂತೆ ಆಕ್ಷೇಪ , ಪ್ರತಿಭಟನೆ ಮಾಡಿಸಿ, ನನ್ನ ಅರ್ಜಿಯನ್ನು ತಡೆ ಹಿಡಿಯುವ ಕೆಲಸ ನಡೆದಿತ್ತು.  ಕಾನೂನುಬದ್ಧವಾಗಿದ್ದರೂ ನನ್ನನ್ನು ಅಪರಾಧಿಯಂತೆ ಬಿಂಬಿಸಿದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !