ಶುಕ್ರವಾರ, ಜೂನ್ 25, 2021
27 °C

Covid-19: ವಾರದಲ್ಲಿ ಕೋವ್ಯಾಕ್ಸಿನ್‌: ಇಲಾಖೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರಿನ ಪ್ರಾದೇಶಿಕ ಲಸಿಕಾ ಕೇಂದ್ರ ಮೂರು ಜಿಲ್ಲೆಗಳಿಗೆ (ದಕ್ಷಿಣ, ಉಡುಪಿ ಹಾಗೂ ಚಿಕ್ಕಮಗಳೂರು) ಲಸಿಕೆ ವಿತರಿಸುವ ಹೊಣೆಗಾರಿಕೆ ಇದೆ. ಇಲ್ಲಿಗೆ ಕೋವ್ಯಾಕ್ಸಿನ್‌ ಲಸಿಕೆ ಸರಬರಾಜು ಮಾಡುವಂತೆ ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆ.

ಕೋವ್ಯಾಕ್ಸಿನ್‌ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಕೊರತೆಯಿದೆ. ಎರಡನೇ ಡೋಸ್‌ ಅವಧಿ ಮುಗಿದವರೂ ಲಸಿಕೆ ಲಭಿಸಿದಾಗ ತೆಗೆದುಕೊಳ್ಳಬಹುದು ಇದಕ್ಕೆ ಪ್ರತ್ಯೇಕ ಬೂಸ್ಟರ್‌ನ ಅಗತ್ಯ ಇಲ್ಲ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದರು. ಕೇಂದ್ರ ಸರ್ಕಾರಕ್ಕೆ  ಕಂಪನಿಗಳು ನೀಡಿದ ಲಸಿಕೆ ರಾಜ್ಯಕ್ಕೆ ಹಂಚಿಕೆಯಾಗಿ ಬಳಿಕ ಜಿಲ್ಲೆಗೆ ವಿತರಣೆ ಆಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಂದು ವಾರದೊಳಗೆ ಕೋವ್ಯಾಕ್ಸಿನ್‌ ಲಭಿಸುವ ಸಾಧ್ಯತೆ ಇದೆ ಎಂದು ಜಿಲ್ಲೆಯಲ್ಲಿ ಲಸಿಕಾ ನೋಡಲ್‌ ಅಧಿಕಾರಿ ಡಾ. ರಾಜೇಶ್‌ ಬಿ.ವಿ. ಹೇಳಿದರು.

'ಪ್ರಥಮ ಡೋಸ್‌  ಲಸಿಕೆ ಮಡೆದ ಬಳಿಕ 2ನೇ ಡೋಸ್‌ ಪಡೆಯಲು ಸ್ವಲ್ಪ ವಿಳಂಬವಾದರೂ ಸಮಸ್ಯೆ ಇಲ್ಲ. ಲಸಿಕೆ ಪಡೆದ 15 ದಿನಗಳ ಬಳಿಕ ಅವರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಪಡೆದ ಫಲಾನುಭವಿಗಳು ಕೂಡ ಮಾಸ್ಕ್‌ ಧರಿಸಿ, ವ್ಯಕ್ತಿಗತ ಅಂತರ ಪಾಲಿಸುವುದು ಕಡ್ಡಾಯ' ಎಂದು  ತಜ್ಞ ವೈದ್ಯರು ತಿಳಿಸಿದ್ದಾರೆ.

ಜಿಲ್ಲೆಗೆ ಹಂಚಿಕೆಯಾದ ಕೋವ್ಯಾಕ್ಸಿನ್‌: ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 40,200 ಡೋಸ್‌ ಕೋವ್ಯಾಕ್ಸಿನ್‌ ಲಭಿಸಿದೆ. ಮಾರ್ಚ್‌ 14ರಂದು 11,200 ಡೋಸ್‌, ಮಾ.21ರಂದು 9,600, ಮಾ.23 ರಂದು 10,400, ಏ.16ರಂದು 7ಸಾವಿರ ಡೋಸ್‌ ಹಾಗೂ ಏ.21ರಂದು 2ಸಾವಿರ ಡೋಸ್‌ ಲಭಿಸಿದೆ.

‘6,425 ಮಂದಿಗೆ ಲಸಿಕೆ’
ಜಿಲ್ಲೆಯಲ್ಲಿ ಬುಧವಾರ 6,425 ಮಂದಿ ಲಸಿಕೆ ಹಾಕಿಸಿದ್ದು, ಇವರಲ್ಲಿ 45 ವರ್ಷ ದಾಟಿದ ಪ್ರಥಮ ಡೋಸ್‌ ಹಾಕಿದವರು 1309, 2ನೇ ಡೋಸ್‌ ಲಸಿಕೆ ಹಾಕಿಸಿಕೊಂಡವರು 1033 ಮಂದಿ. 60 ದಾಟಿದವರು ಮೊದಲ ಡೋಸ್‌ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 688. 2ನೇ ಡೋಸ್ ಹಾಕಿಸಿಕೊಂಡವರು 3097 ಮಂದಿ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಲ್ಲೂಕುವಾರು ವಿವರ

45 ದಾಟಿದವರು
ಮಂಗಳೂರು
: ಮೊದಲ ಡೋಸ್‌ 681, 2ನೇ ಡೋಸ್‌ 536 ಮಂದಿ
ಬಂಟ್ವಾಳ: ಮೊದಲ ಡೋಸ್‌ 313, ಎರಡನೇ ಡೋಸ್‌: 289ಮಂದಿ
ಬೆಳ್ತಂಗಡಿ: ಮೊದಲ ಡೋಸ್‌ ಪಡೆದವರು: 25, 2ನೇ ಡೋಸ್‌ ಪಡೆವರು: 64 ಮಂದಿ
ಪುತ್ತೂರು: ಮೊದಲ ಡೋಸ್‌: 179, ಎರಡನೇ ಡೋಸ್‌: 90 ಮಂದಿ
ಸುಳ್ಯ: ಮೊದಲ ಡೋಸ್‌ 111, ಎರಡನೇ ಡೋಸ್‌: 54 ಮಂದಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು