ಮಂಗಳವಾರ, ಜೂನ್ 22, 2021
24 °C

ಮಂಗಳೂರು: ವಾರಾಂತ್ಯದ ಕರ್ಫ್ಯೂ‌ ಜಾರಿ; ಅಗತ್ಯ‌ವಸ್ತು ಖರೀದಿಗೆ ಮುಗಿ ಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದರು.

ಜಿಲ್ಲೆಯಲ್ಲಿ ಶುಕ್ರವಾರದಿಂದ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ‌ ವಾರಾಂತ್ಯದ ಕರ್ಫ್ಯೂ ವಿಧಿಸಲಾಗಿದೆ.

ಇದನ್ನೂ ಓದಿ: 

ಬೆಳಿಗ್ಗೆ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ದಿನಸಿ, ಮತ್ತಿತರ ಅಂಗಡಿಗಳು ಬಂದ್‌ ಆಗಲಿವೆ. ಹೀಗಾಗಿ ಜನರು ಶುಕ್ರವಾರವೇ 3‌ದಿನಗಳಿಗೆ ಅಗತ್ಯವಿರುವ‌ ವಸ್ತುಗಳನ್ನು ಖರೀದಿಸಿದರು.


ರಾತ್ರಿಯಿಂದ ವಾರಾಂತ್ಯದ ಕರ್ಫ್ಯೂ‌ ಜಾರಿ

ಒಂದೆಡೆ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.‌ ಇನ್ನೊಂದೆಡೆ ಜಿಲ್ಲಾಡಳಿತ ದಿಢೀರ್ ಈ ರೀತಿಯ ಆದೇಶ ಹೊರಡಿಸುತ್ತಿದೆ. ಇದರಿಂದ ಆತಂಕಗೊಂಡ ಜನರು ಮಾರ್ಗಸೂಚಿಯ‌ ಪಾಲನೆ‌ ಇಲ್ಲದೇ ಖರೀದಿಗೆ ಮುಗಿ ಬೀಳುವಂತಾಗಿದೆ‌ ಎಂದು ಮಾರುಕಟ್ಟೆಗೆ ಬಂದಿದ್ದ ಹಿರಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 

ತರಕಾರಿ, ಹಣ್ಣು, ದಿನಸಿಗಳನ್ನು ಹೇಳಿದಷ್ಟು ಬೆಲೆಗೆ ಖರೀದಿಸುವ ಅನಿವಾರ್ಯತೆ ಎದುರಾಗಿತ್ತು. 9 ಗಂಟೆಯೊಳಗೆ ಖರೀದಿಸದಿದ್ದರೆ, ಎರಡು ದಿನ ಯಾವುದೇ ವಸ್ತುಗಳು ಸಿಗುವುದಿಲ್ಲ. ಹಾಗಾಗಿ ರೇಟ್ ಕೇಳುವ ಗೋಜಿಗೆ ಜನರು ಹೋಗಲಿಲ್ಲ. ವ್ಯಾಪಾರಿಗಳು ಬೆಳಗಿನ 3 ತಾಸಿನಲ್ಲಿ ಭರ್ಜರಿ ವ್ಯಾಪಾರ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು